ADVERTISEMENT

ಮೋದಿಯಂತೆ ಹೇಳಿಕೊಂಡು ತಿರುಗುವುದಿಲ್ಲ: ಮಮತಾ

ಪ್ರಜಾವಾಣಿ ವಾರ್ತೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 19:28 IST
Last Updated 25 ಏಪ್ರಿಲ್ 2019, 19:28 IST
ಮಮತಾ
ಮಮತಾ   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮಗೆ ಕುರ್ತಾ ಕಳುಹಿಸುತ್ತಾರೆ ಎಂದು ಪ್ರಧಾನಿ ಮೋದಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಕ್ಕೆ ಮಮತಾ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಮೋದಿ ಅವರಿಗೆ ಕುರ್ತಾ ಕಳುಹಿಸಿದ್ದು ಕೇವಲ ಸೌಜನ್ಯಕ್ಕಾಗಿಯೇ ಹೊರತು ರಾಜಕೀಯ ಕಾರಣಗಳಿಗಾಗಿ ಅಲ್ಲ ಎಂದು ಮಮತಾ ಸ್ಪಷ್ಟಪಡಿಸಿದ್ದಾರೆ.

‘ಅವರಿಗೆ ಕುರ್ತಾ ಕಳುಹಿಸುವುದರಲ್ಲಿ ತಪ್ಪೇನಿದೆ? ಮೋದಿ ಅವರಷ್ಟೇ ಅಲ್ಲ, ಹಲವು ಪ್ರಮುಖ ನಾಯಕರಿಗೆ ನಾನು ಉಡುಗೊರೆಗಳನ್ನು ನೀಡುತ್ತೇನೆ. ಆದರೆ ಮೋದಿ ಅವರ ರೀತಿ ನಾವು ಎಲ್ಲಿಯೂ ಹೇಳಿಕೊಳ್ಳುವುದಿಲ್ಲ ಅಷ್ಟೇ. ಇದು ನಮ್ಮ ಸಂಸ್ಕೃತಿ. ಇದು ಸೌಜನ್ಯದ ವಿಷಯ. ರಾಜಕೀಯಕ್ಕೂ ಇದಕ್ಕೂ ಸಂಬಂಧವಿಲ್ಲ’ ಎಂದು ಮಮತಾ ಹೇಳಿದ್ದಾರೆ.

ADVERTISEMENT

ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲುಮೋದಿ ಅವರು ಯತ್ನಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಮೋದಿ ಅವರು ಸಿಬಿಐ ವಿಚಾರ ಮುಂದಿಟ್ಟುಕೊಂಡು ಭಯ ಹುಟ್ಟಿಸಿದರೂ ಅವರೊಂದಿಗೆ ಸಭ್ಯವಾಗಿಯೇ ನಡೆದುಕೊಳ್ಳುತ್ತಿದ್ದೇನೆ ಎಂದು ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.