ADVERTISEMENT

ನಗರಸಭೆಯಿಂದ ಮತದಾನ ಜಾಗೃತಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 10:19 IST
Last Updated 9 ಏಪ್ರಿಲ್ 2019, 10:19 IST
ನಗರಸಭೆ ಸಿಬ್ಬಂದಿಯಿಂದ ಗದುಗಿನಲ್ಲಿ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಗಳವಾರ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಪಂಚಾಯ್ತಿ ಇಒ ಎಚ್.ಎಸ್. ಜಿನಗಾ, ಎಇಇ ಎಲ್.ಜಿ.ಪತ್ತಾರ, ಎಂಜಿನಿಯರ್‌ ಎಸ್.ಎ. ಬಂಡಿವಡ್ಡರ ಇದ್ದರು
ನಗರಸಭೆ ಸಿಬ್ಬಂದಿಯಿಂದ ಗದುಗಿನಲ್ಲಿ ಮಹಾತ್ಮ ಗಾಂಧಿ ವೃತ್ತದಲ್ಲಿ ಮಂಗಳವಾರ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು. ತಾಲ್ಲೂಕು ಪಂಚಾಯ್ತಿ ಇಒ ಎಚ್.ಎಸ್. ಜಿನಗಾ, ಎಇಇ ಎಲ್.ಜಿ.ಪತ್ತಾರ, ಎಂಜಿನಿಯರ್‌ ಎಸ್.ಎ. ಬಂಡಿವಡ್ಡರ ಇದ್ದರು   

ಗದಗ: ನಗರಸಭೆ ಸಿಬ್ಬಂದಿಯಿಂದ ನಗರದಲ್ಲಿ ಮಂಗಳವಾರ ಮತದಾನದ ಜಾಗೃತಿ ಕಾರ್ಯಕ್ರಮ ನಡೆಯಿತು.

ನಗರಸಭೆ ಕಚೇರಿಯಿಂದ ಆರಂಭವಾದ ಮತದಾನದ ಜಾಗೃತಿ ಮೂಡಿಸುವ ಮೆರವಣಿಗೆಯು ಗಾಂಧಿ ವೃತ್ತ, ಹಳೇ ಕೋರ್ಟ್‌, ಬಸವೇಶ್ವರ ನಗರ, ಡಿ.ಸಿ. ಮಿಲ್‌ನ ತಳಗೇರಿ ಓಣಿ, ಜವಳ ಗಲ್ಲಿ, ಹುಡ್ಕೋ ಕಾಲೊನಿ, ಬೆಟಗೇರಿ ಭಾಗದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಗದಗ ತಾಲ್ಲೂಕು ಪಂಚಾಯ್ತಿ ಇಒ ಎಚ್.ಎಸ್. ಜಿನಗಾ ಮೆರವಣಿಗೆಗೆ ಚಾಲನೆ ನೀಡಿದರು. ತಾಲ್ಲೂಕು ಆರೋಗ್ಯ ಅಧಿಕಾರಿ ಎಸ್.ಎಸ್. ನೀಲಗುಂದ, ಎಇಇ ಎಲ್.ಜಿ.ಪತ್ತಾರ, ಎಂಜಿನಿಯರ್‌ ಎಸ್.ಎ. ಬಂಡಿವಡ್ಡರ, ಎಸ್.ಬಿ. ಮರಿಗೌಡರ, ಅಶೋಕ ದೊಡ್ಡಮನಿ, ಎನ್.ಎಂ. ಮಕಾನದಾರ, ವಿಜಯಲಕ್ಷ್ಮೀ ಮುಟಗಾರ, ಎಸ್.ವಿ. ಹುಣಸೀಮರದ, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಗುಂಪುಗಳ ಸದಸ್ಯರು ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.