ADVERTISEMENT

ಹೊಸಕೋಟೆ: ಹಣ, ಜಮೀನು, ಜಾನುವಾರು ಪಣಕ್ಕೆ

​ಪ್ರಜಾವಾಣಿ ವಾರ್ತೆ
Published 12 ಮೇ 2023, 4:42 IST
Last Updated 12 ಮೇ 2023, 4:42 IST
Venugopala K.
   Venugopala K.

ಹೊಸಕೋಟೆ: ಜಿದ್ದಾಜಿದ್ದಿನ ರಾಜಕೀಯಕ್ಕೆ ಹೆಸರು ಮಾಡಿದ್ದ ಕ್ಷೇತ್ರದಲ್ಲಿ ಶೇ90.80 ಮತದಾನ ದಾಖಲಾಗಿದೆ. ಕ್ಷೇತ್ರದ ಇಬ್ಬರು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಬಂಧಿಯಾಗಿದೆ. ಈ ಮತಪೆಟ್ಟಿಗಳ ಮೇಲೆ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ.

ಕ್ಷೇತ್ರದ ಜನರು ತಮ್ಮ ಅಭ್ಯರ್ಥಿಗಳ ಸೋಲು–ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ  ಅಭ್ಯರ್ಥಿಗಳು ಚುನಾವಣೆ ಮುಗಿದ ನಂತರ ವಿಶ್ರಾಂತಿಗೆ ಮೊರೆ ಹೋಗಿದ್ದಾರೆ.

ಹಣ, ಭೂಮಿ, ಜಾನುವಾರ ಪಣಕ್ಕೆ: ಕ್ಷೇತ್ರದಾದ್ಯಂತ ಬೆಟ್ಟಿಂಗ್ ಜೋರಾಗಿಯೇ ನಡೆದಿದೆ. ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮದೇ ಗೆಲುವು ಎಂಬಂತೆ ಜಿದ್ದಿಗೆ ಇಳಿದಿದ್ದಾರೆ. ಹಣ, ಜಮೀನು, ಜಾನುವಾರು ಸೇರಿದಂತೆ ವಿವಿಧ ಬೆಲೆ ಬಾಳುವ ವಸ್ತುಗಳನ್ನು ಪಣಕ್ಕಿಡಲು ಸಿದ್ಧರಾಗಿದ್ದಾರೆ.

ADVERTISEMENT

ಗೆಲುವಿನ ಲೆಕ್ಕಾಚಾರ: ಹೊಸಕೋಟೆ ರಾಜಕಾರಣ ಪಕ್ಷಕ್ಕಿಂತ ವ್ಯಕ್ತಿಗಳ ಮೇಲೆ ನಡೆಯುವಂತದ್ದು. ಇಬ್ಬರೂ ಅಭ್ಯರ್ಥಿಗಳು ಪರಸ್ಪರ ಪಕ್ಷ ಬದಲಿಸಿ ಚುನಾವಣೆ ಎದುರಿಸಿದ್ದಾರೆ.

ಕಾರ್ಯಕರ್ತರ ದೇಗುಲ ದರ್ಶನ: ಚುನಾವಣೆ ಮತ್ತು ಫಲಿತಾಂಶದ ಮಧ್ಯೆ ಎರಡು ದಿನ ಬಿಡುವು ಸಿಕ್ಕಿದ್ದು, ಅಭ್ಯರ್ಥಿಗಳ ಗೆಲುವಿಗಾಗಿ ಕಾರ್ಯಕರ್ತರು ದೇಗುಲ ದರ್ಶನ ಮಾಡುತ್ತಿದ್ದಾರೆ. ಫಲಿತಾಂಶದ ವೇಳೆಗೆ ವಾಪಸ್ ಬರಲು ಯೋಗ್ಯವಾದ ಧಾರ್ಮಿಕ ಸ್ಥಳಗಳಿಗೆ ತೆರಳಿದ್ದಾರೆ. ತಿರುಪತಿ, ಧರ್ಮಸ್ಥಳ, ಕದಿರಿ ಮತ್ತಿತರೆ ಸ್ಥಳಗಳಿಗೆ ಕಾರ್ಯಕರ್ತರು ತೆರಳಿದ್ದಾರೆ.

ಎಂಟಿಬಿ ನಾಗರಾಜ್ ಬಿಜೆಪಿ ಅಭ್ಯರ್ಥಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.