ADVERTISEMENT

ಲೋಕಸಭೆ ಚುನಾವಣೆ: ಉತ್ತರ ಗೋವಾದಲ್ಲಿ ಬಿಜೆಪಿಯ ಶ್ರೀಪಾದ್‌ vs ಕಾಂಗ್ರೆಸ್‌ನ ಖಲಪ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 21:39 IST
Last Updated 26 ಏಪ್ರಿಲ್ 2024, 21:39 IST
<div class="paragraphs"><p>ರಮಾಕಾಂತ್‌ ಖಲಪ್‌, ಶ್ರೀಪಾದ್‌ ನಾಯ್ಕ್‌</p></div>

ರಮಾಕಾಂತ್‌ ಖಲಪ್‌, ಶ್ರೀಪಾದ್‌ ನಾಯ್ಕ್‌

   
ಶ್ರೀಪಾದ್‌ ನಾಯ್ಕ್‌: ಬಿಜೆಪಿ

ಉತ್ತರ ಗೋವಾ ಲೋಕಸಭಾ ಕ್ಷೇತ್ರವನ್ನು 25 ವರ್ಷಗಳಿಂದ ಪ್ರತಿನಿಧಿಸುತ್ತಿರುವ ಶ್ರೀಪಾದ್‌ ನಾಯ್ಕ್‌ ಅವರೇ ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕೇಂದ್ರ ಪ್ರವಾಸೋದ್ಯಮ ಸಚಿವರಾಗಿರುವ ಇವರು ಸ್ಥಳೀಯವಾಗಿಯೂ ಪ್ರಭಾವಿ ಮುಖಂಡರಾಗಿದ್ದಾರೆ.

2019ರ ಚುನಾವಣೆಯಲ್ಲಿ ಶ್ರೀಪಾದ್‌ ಅವರು, 80,247 ಮತಗಳ ಅಂತರದಿಂದ ಕಾಂಗ್ರೆಸ್‌ನ ಗಿರೀಶ್‌ ಚೋಡಂಕರ್ ಅವರನ್ನು ಸೋಲಿಸಿದ್ದರು. ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದಿರುವ ಶ್ರೀಪಾದ್‌ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿರಿಸಿ ಮತಯಾಚಿಸುತ್ತಿದ್ದಾರೆ.

ADVERTISEMENT

ಪಕ್ಷ ಸಂಘಟನೆಯ ಮೂಲಕವೂ ಚಿರಪರಿಚಿತರಾಗಿರುವ ಶ್ರೀಪಾದ್‌ ಅವರು ಈ ಬಾರಿಯೂ ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸ ಇಲ್ಲಿನ ಬಿಜೆಪಿ ಮುಖಂಡರಲ್ಲಿದೆ.

ರಮಾಕಾಂತ್‌ ಖಲಪ್‌: ಕಾಂಗ್ರೆಸ್‌

ಉತ್ತರ ಗೋವಾ ಕ್ಷೇತ್ರದಲ್ಲಿ ಭದ್ರವಾಗಿ ಬೇರೂರಿರುವ ಶ್ರೀಪಾದ್‌ ನಾಯ್ಕ್ ಅವರನ್ನು ಮಣಿಸಲು ಕಾಂಗ್ರೆಸ್‌ ಪಕ್ಷವು ಈ ಸಲ ಕೇಂದ್ರದ ಮಾಜಿ ಸಚಿವ ರಮಾಕಾಂತ್‌ ಖಲಪ್‌ ಅವರನ್ನು ಅಖಾಡಕ್ಕಿಳಿಸಿದೆ. ಗೋವಾದ ಮಾಜಿ ಉಪ ಮುಖ್ಯಮಂತ್ರಿಯಾಗಿರುವ ರಮಾಕಾಂತ್‌ ಅವರು, ‘ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷ’ದ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದವರು. ಬಳಿಕ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

ಅಲ್ಪ ಕಾಲ ಬಿಜೆಪಿಯಲ್ಲೂ ಇದ್ದರು. ಗೋವಾ ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. 1996ರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಈ ಬಾರಿ ಪಕ್ಷವು ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದು, ರಮಾಕಾಂತ್‌ ಅವರ ಗೆಲುವಿನ ವಿಶ್ವಾಸವನ್ನು ಹೆಚ್ಚಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.