ADVERTISEMENT

ಕಾಲೇಜು ಮೆಟ್ಟಿಲು ಹತ್ತದ ನನಗೆ ಉನ್ನತ ಶಿಕ್ಷಣ ಖಾತೆ: ಜಿ.ಟಿ.ದೇವೇಗೌಡ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 9 ಜೂನ್ 2018, 8:29 IST
Last Updated 9 ಜೂನ್ 2018, 8:29 IST
ಕಾಲೇಜು ಮೆಟ್ಟಿಲು ಹತ್ತದ ನನಗೆ ಉನ್ನತ ಶಿಕ್ಷಣ ಖಾತೆ: ಜಿ.ಟಿ.ದೇವೇಗೌಡ ಅಸಮಾಧಾನ
ಕಾಲೇಜು ಮೆಟ್ಟಿಲು ಹತ್ತದ ನನಗೆ ಉನ್ನತ ಶಿಕ್ಷಣ ಖಾತೆ: ಜಿ.ಟಿ.ದೇವೇಗೌಡ ಅಸಮಾಧಾನ   

ಮೈಸೂರು: ತಮಗೆ ಹಂಚಿಕೆ ಮಾಡಿರುವ ಉನ್ನತ ಶಿಕ್ಷಣ ಖಾತೆ ಬಗ್ಗೆ ಸಚಿವ ಜಿ.ಟಿ.ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜನರೊಂದಿಗೆ ಬೆರೆತು ಕೆಲಸ ಮಾಡಲು ಸಾಧ್ಯವಾಗುವ ಖಾತೆ ಬಯಸಿದ್ದೆ. ಕಂದಾಯ ಅಥವಾ ಸಾರಿಗೆ ಖಾತೆ ಸಿಗಬಹುದು ಎಂದುಕೊಂಡಿದ್ದೆ. ಆದರೆ, ಕಾಲೇಜು ಮೆಟ್ಟಿಲು ಹತ್ತದ ನನಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದಾರೆ’ ಎಂದು ದೇವೇಗೌಡರು ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ.

ಮೈಸೂರಿನ ವಿಜಯನಗರದಲ್ಲಿರುವ ಅವರ ನಿವಾಸದ ಎದುರು ಶನಿವಾರ ಬೆಂಬಲಿಗರು ಹಾಗೂ ಜೆಡಿಎಸ್‌ನ ಸ್ಥಳೀಯ ಕಾರ್ಯಕರ್ತರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಯಾರ ಕೈಗೂ ಸಿಗದ ದೇವೇಗೌಡರು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ADVERTISEMENT

ಅವರ ಪುತ್ರ ಜಿ.ಡಿ.ಹರೀಶ್‌ ಅವರನ್ನು ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಯಾವುದೇ ಕಾರಣಕ್ಕೂ ಈ ಖಾತೆ ಒಪ್ಪಿಕೊಳ್ಳಬಾರದು, ದೇವೇಗೌಡರು ಮೌನ ವಹಿಸಬಾರದು’ ಎಂದು ಆಗ್ರಹಿಸಿದ್ದಾರೆ.

‘ಕಾರ್ಯಕರ್ತರು, ಬೆಂಬಲಿಗರ ಮನವಿಯನ್ನು ಕುಮಾರಸ್ವಾಮಿ ಗಮನಕ್ಕೆ ತರುತ್ತೇವೆ. ಖಾತೆ ಬದಲಾವಣೆಯ ವಿಶ್ವಾಸವಿದೆ. ಕಾಲಾವಕಾಶ ಕೊಡಿ’ ಎಂದು ಕಾರ್ಯಕರ್ತರಿಗೆ ಹರೀಶ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.