ಬೆಂಗಳೂರು: ಸರ್ಕಾರ ರಚನೆಗೆ ಸಂಖ್ಯಾಬಲದ ಸಮಸ್ಯೆ ಎದುರಾಗದು ಎಂದು ಬಿಜೆಪಿ ಮುಖಂಡ ಸಂಸದ ಬಿ. ಶ್ರೀರಾಮುಲು ಹೇಳಿದರು.
ಬುಧವಾರ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸಿದಂತೆ ನಾವು ಯಾವುದೇ ‘ಕುದುರೆ ವ್ಯಾಪಾರ’ಕ್ಕೆ ಕೈಹಾಕಿಲ್ಲ ಎಂದ ಅವರು, ಅಗತ್ಯವಿರುವ ಶಾಸಕರನ್ನು ಜತೆಗೂಡಿಸುವ ಯಾವ ಜವಾಬ್ದಾರಿಯನ್ನೂ ನಾನು ಹೊತ್ತಿಲ್ಲ ಎಂದಷ್ಟೇ ಹೇಳಿ ತೆರಳಿದರು.
* ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.