ADVERTISEMENT

ಮುದ್ದಹನುಮೆಗೌಡ ನಾಮಪತ್ರ ಹಿಂಪಡೆಯುವ ವಿಶ್ವಾಸ: ಸಚಿವ ಶ್ರೀನಿವಾಸ್‌

ಲೋಕಸಭಾ ಚುನಾವಣೆ 2019

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 10:14 IST
Last Updated 27 ಮಾರ್ಚ್ 2019, 10:14 IST
ಸಭೆಯಲ್ಲಿ ಎಸ್.ಆರ್‌.ಶ್ರೀನಿವಾಸ್ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ – ಪ್ರಜಾವಾಣಿ ಚಿತ್ರ
ಸಭೆಯಲ್ಲಿ ಎಸ್.ಆರ್‌.ಶ್ರೀನಿವಾಸ್ ಹಾಗೂ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ – ಪ್ರಜಾವಾಣಿ ಚಿತ್ರ    

ತುಮಕೂರು: ನಾವು ಮತ್ತು ಉಪಮುಖ್ಯಮಂತ್ರಿ ಇತರರು ಇಲ್ಲಿ ಸಭೆ ನಡೆಸಿದ್ದು, ಚುನಾವಣೆ ಸಿದ್ಧತೆ ಬಗ್ಗೆ ಹೊರೆತು,ಮುದ್ದಹನುಮೇಗೌಡ, ರಾಜಣ್ಣ ಅವರ ವಿಚಾರದ ಬಗ್ಗೆ ಅಲ್ಲ ಎಂದು ಸಣ್ಣ ಕೈಗಾರಿಕಾ ಸಚಿವ ಎಸ್.ಆರ್‌.ಶ್ರೀನಿವಾಸ್ ಹೇಳಿದರು.

ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಮುದ್ದಹನುಮೇಗೌಡ, ರಾಜಣ್ಣ ಅವರು ನಾಮಪತ್ರ ಹಿಂದಕ್ಕೆ ಪಡೆಯುವ ವಿಶ್ವಾಸವಿದೆ. ಅವರ ಮನವೊಲಿಕೆ ಕಾಂಗ್ರೆಸ್‌ಗೆ ಬಿಟ್ಟ ವಿಚಾರ ನಮ್ಮದಲ್ಲ’ ಎಂದರು.

ದೇವೇಗೌಡರು ಈ ಕ್ಷೇತ್ರದಲ್ಲಿ ಗೆಲ್ಲುವ ಭರವಸೆ ಇದೆ. ಅವರೂ ಈಗಾಗಲೇ ಸ್ಪಷ್ಟಪಡಿಸಿದ್ದು, ಪ್ರಧಾನಿ ಆಗಲ್ಲ. ರಾಹುಲ್ ಗಾಂಧಿ ಅವರ ಕೈ ಬಲಪಡಿಸುತ್ತೇನೆ ಎಂದಿದ್ದಾರೆ ಎಂದರು.

ADVERTISEMENT

ಕೆ.ಎನ್. ರಾಜಣ್ಣ ಅವರು ನೀಡಿದ ರೆಡ್ ಲೈಟ್ ಹೇಳಿಕೆ ಬಗ್ಗೆ ನಾನೇನೂ ಪ್ರತಿಕ್ರಿಯಿಸಲ್ಲ. ಅವರು ದೊಡ್ಡವರು. ಅಂಥವರ ವಿವಾದಿತ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದರು.

ಕುಟುಂಬ ರಾಜಕಾರಣದ ಚರ್ಚೆ ಅರ್ಥಹೀನ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.