ADVERTISEMENT

Election FAQs: ನಿಮ್ಮ ಮತಗಟ್ಟೆ ವಿವರ ತಿಳಿದುಕೊಳ್ಳುವುದು ಹೇಗೆ?

ನಿಮ್ಮ ಮತಗಟ್ಟೆ ವಿಳಾಸ ತಿಳಿದುಕೊಳ್ಳುವುದು ಹೇಗೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2023, 8:34 IST
Last Updated 26 ಏಪ್ರಿಲ್ 2023, 8:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   ಚಿತ್ರ: ರಾಯಿಟರ್ಸ್

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಲಿದೆ. ಈ ಬಾರಿ ಮತದಾನ ಪ್ರಮಾಣ ಶೇ 75ಕ್ಕಿಂತ ಹೆಚ್ಚಾಗಬೇಕು ಎಂದು ಚುನಾವಣಾ ಆಯೋಗ ಗುರಿ ಇಟ್ಟುಕೊಂಡಿದೆ. ಅದಕ್ಕಾಗಿ ಮತದಾರರಿಗೆ ಜಾಗೃತಿ ಮೂಡಿಸುವ ಅಭಿಯಾನ ನಡೆಸುತ್ತಿದೆ.

ಹೊಸದಾಗಿ ಮತದಾನ ಮಾಡುವವರಿಗೆ ಅಥವಾ ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸ ಬದಲಾಯಿಸಿದ್ದಾರೆ, ತಮ್ಮ ಮತಗಟ್ಟೆಯ ಯಾವುದು ಎನ್ನುವ ಗೊಂದಲ ಕಾಡುವುದು ಸಹಜ. ಅವರು ಈ ಕಳಗಿನ ಪ್ರಕ್ರಿಯೆ ಮೂಲಕ ತಮ್ಮ ಮತಗಟ್ಟೆಯ ವಿಳಾಸ ತಿಳಿದುಕೊಳ್ಳಬಹುದು.

  • www.nvsp.in ವೆಬ್‌ಸೈಟ್‌ಗೆ ಭೇಟಿ ನೀಡಿ

    ADVERTISEMENT
  • ಅಲ್ಲಿ ‘Know Your‘ ಆಯ್ಕೆ ಕ್ಲಿಕ್‌ ಮಾಡಿ

  • ನಿಮ್ಮ ಎಪಿಕ್‌ ನಂಬರ್‌ (ವೋಟರ್‌ ಐಡಿ ಸಂಖ್ಯೆ) ನಮೂದಿಸಿ

  • ಸರ್ಚ್‌ ಆಯ್ಕೆ ಕ್ಲಿಕ್ ಮಾಡಿ

  • ನಿಮ್ಮ ಮತಗಟ್ಟೆಯ ವಿಳಾಸ, ಬಿಎಲ್‌ಒ ಹೆಸರು ಹಾಗೂ ಅವರ ಮೊಬೈಲ್‌ ಸಂಖ್ಯೆ ಕಾಣಿಸಿಕೊಳ್ಳುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.