ADVERTISEMENT

‘ಅಮ್ಮ ಐ ಲವ್‌ ಯು’ ಬಿಡುಗಡೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 31 ಮೇ 2018, 19:30 IST
Last Updated 31 ಮೇ 2018, 19:30 IST
ನಿಶ್ಚಿಕಾ ನಾಯ್ಡು ಮತ್ತು ಚಿರಂಜೀವಿ ಸರ್ಜಾ
ನಿಶ್ಚಿಕಾ ನಾಯ್ಡು ಮತ್ತು ಚಿರಂಜೀವಿ ಸರ್ಜಾ   

ತಮಿಳಿನ ‘ಪಿಚ್ಚೈಕ್ಕಾರನ್’ ಚಿತ್ರ ಕನ್ನಡದಲ್ಲಿ ‘ಅಮ್ಮ ಐ ಲವ್‌ ಯು’ ಹೆಸರಿನಡಿ ರೂಪಾಂತರಗೊಂಡು ತೆರೆಗೆ ಬರಲು ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಅಮ್ಮಂದಿರ ದಿನ’ದಂದೇ ಈ ಸಿನಿಮಾ ಬಿಡುಗಡೆಯಾಗಬೇಕಿತ್ತು.

ಆದರೆ, ಐಪಿಎಲ್‌ ಪಂದ್ಯ ಮತ್ತು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಹಿನ್ನೆಲೆಯಲ್ಲಿ ಬಿಡುಗಡೆಯನ್ನು ಮುಂದೂಡಲಾಗಿತ್ತು. ಆದರೂ, ಅಮ್ಮಂದಿರ ದಿನದಂದು ಚಿತ್ರತಂಡ ಟ್ರೇಲರ್ ಅನ್ನು ಲೋಕಾರ್ಪಣೆ ಮಾಡಿದೆ. ಮೂಲ ಚಿತ್ರದಲ್ಲಿ ವಿಜಯ್‍ ಆ್ಯಂಥೊನಿ ನಿರ್ವಹಿಸಿದ್ದ ಪಾತ್ರವನ್ನು ಕನ್ನಡದಲ್ಲಿ ಚಿರಂಜೀವಿ ಸರ್ಜಾ ನಿರ್ವಹಿಸಿದ್ದಾರೆ. ತಾಯಿಯ ಸೆಂಟಿಮೆಂಟ್‌ ಸುತ್ತ ಕಥೆ ಹೆಣೆಯಲಾಗಿದೆ. ಚಿರು ಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ನಾಯಕಿಯಾಗಿ ನಿಶ್ವಿಕಾ ನಾಯ್ಡು ಅವರಿಗೆ ಇದು ಪ್ರಥಮ ಚಿತ್ರ. ತಾಯಿ ಪಾತ್ರದಲ್ಲಿ ನಟಿ ಸಿತಾರಾ ನಟಿಸಿದ್ದಾರೆ. ಉಳಿದಂತೆ ಪ್ರಕಾಶ್‍ ಬೆಳವಾಡಿ, ಗಿರಿ ದ್ವಾರಕೀಶ್, ಚಿಕ್ಕಣ್ಣ, ಬಿರಾದಾರ್, ರವಿಕಾಳೆ ತಾರಾಗಣದಲ್ಲಿದ್ದಾರೆ.

ADVERTISEMENT

‘ಆ ದಿನಗಳು’, ‘ಆಟಗಾರ’ ಚಿತ್ರದ ಖ್ಯಾತಿಯ ಕೆ.ಎಂ. ಚೈತನ್ಯ ಈ ಚಿತ್ರ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದೆ. ಛಾಯಾಗ್ರಹಣ ಶೇಖರ್ ಚಂದ್ರು ಅವರದ್ದು. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಯೋಗಿ ದ್ವಾರಕೀಶ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ತಿಂಗಳ ಎರಡನೆ ವಾರದಂದು 150ಕ್ಕೂ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.