ನವದೆಹಲಿ: ವಿವಾದದ ಗೂಡಾಗಿರುವ ಸಂಜಯ್ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾಗೆ ಯು/ಎ ಪ್ರಮಾಣ ಪತ್ರ ನೀಡಿದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಶೀರ್ಷಿಕೆಯಲ್ಲಿ ಬದಲಾವಣೆ ತರಲು ಸೂಚಿಸಿದೆ.
ಈಗಿರುವ ಪದ್ಮಾವತಿ ಎಂಬ ಹೆಸರನ್ನು 'ಪದ್ಮಾವತ್' ಎಂದು ಬದಲಾಯಿಸುವಂತೆ ಸಿಬಿಎಫ್‌ಸಿ ಹೇಳಿದೆ.
ಸಿಬಿಎಫ್‌ಸಿ ಈ ಬಗ್ಗೆ ಗುರುವಾರ ಸಭೆ ನಡೆಸಿತ್ತು. ಯು/ಎ ಪ್ರಮಾಣ ಪತ್ರ ನೀಡಿದ ಮಂಡಳಿಯು, ಸಿನಿಮಾ ತಂಡ ನೀಡಿದ ಕಥೆ ಹಾಗೂ ಸಂಪನ್ಮೂಲಗಳನ್ನು ಆಧರಿಸಿ ಹೆಸರಿನಲ್ಲಿ ಬದಲಾವಣೆ ತರಲು ತಾಕೀತು ಮಾಡಿದೆ.
ಸಭೆಯಲ್ಲಿ ಮಂಡಳಿ ಅಧ್ಯಕ್ಷ ಪ್ರಸೂನ್ ಜೋಶಿ, ಮಂಡಳಿ ಸದಸ್ಯರು, ಸಿನಿಎಫ್‌ಸಿ ಅಧಿಕಾರಿಗಳು, ವಿಶೇಷ ಸಲಹಾ ಸಮಿತಿ ಸದಸ್ಯರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.