ADVERTISEMENT

ರಜನಿ ರಾಣಾ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 18:30 IST
Last Updated 3 ಫೆಬ್ರುವರಿ 2011, 18:30 IST

‘ಎಂದಿರನ್’ ಚಿತ್ರದ ಯಶಸ್ಸಿನ ನಂತರ ರಜನಿಕಾಂತ್ ‘ರಾಣಾ’ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅವರ ‘ಮುತ್ತು’ ಮತ್ತು ‘ಪಡೆಯಪ್ಪ’ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ಎಸ್.ರವಿಕುಮಾರ್ ಈ ಚಿತ್ರದ ಸಾರಥಿ.

 ತಮಿಳು, ಹಿಂದಿ, ತೆಲುಗು ಭಾಷೆಗಳಲ್ಲಿ ತಯಾರಾಗುವ ಈ ಚಿತ್ರದ ಚಿತ್ರೀಕರಣ ಮಾರ್ಚ್‌ನಲ್ಲಿ ಆರಂಭಗೊಳ್ಳಲಿದೆ. ಈ ಚಿತ್ರದಲ್ಲಿ ರಜನಿ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವಿಶಿಷ್ಟವಾದ ಆಕ್ಷನ್ ಚಿತ್ರವನ್ನು ರೂಪಿಸುವುದು ಚಿತ್ರತಂಡದ ಉದ್ದೇಶ.

ಎಂದಿನಂತೆ ರೆಹಮಾನ್ ಸಂಗೀತ, ರತ್ನವೇಲು ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರ 2012ಕ್ಕೆ ಬಿಡುಗಡೆಯಾಗಲಿದ್ದು ರಜನಿ ಅಭಿಮಾನಿಗಳ ಬಯಸುವುದೆಲ್ಲಾ ಇದರಲ್ಲಿ ಇರಲಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.