ADVERTISEMENT

ರಾಮ್‌ಚರಣ್ ಹೊಸ ಕಸರತ್ತು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ಅವರ ಮಗ ರಾಮ್‌ಚರಣ್ ತೇಜ ತಮ್ಮ ಮೊದಲ ಬಾಲಿವುಡ್ ಸಿನಿಮಾ `ಜಂಝೀರ್'ಗಾಗಿ ಸಾಕಷ್ಟು ಕಸರತ್ತು ನಡೆಸುತ್ತಿದ್ದಾರಂತೆ.

`ಜಂಝೀರ್' ಚಿತ್ರದಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಸಿಕೊಳ್ಳಲಿರುವ ರಾಮ್ ಚರಣ್, ಕಟ್ಟುಮಸ್ತಾದ ದೇಹಕ್ಕಾಗಿ ಆಸ್ಟ್ರೇಲಿಯಾದ ಫಿಟ್‌ನೆಸ್ ತರಬೇತುದಾರರಿಂದ ಪಾಠ ಹೇಳಿಸಿಕೊಂಡು ಅಣಿಯಾಗುತ್ತಿದ್ದಾರೆ. ಮೂರರಿಂದ ನಾಲ್ಕು ಗಂಟೆ ಕಠಿಣ ಅಭ್ಯಾಸದಲ್ಲಿ ತೊಡಗಿರುವ ಅವರು ಫಿಟ್‌ನೆಸ್ ಕಸರತ್ತಿನಿಂದ ಶೂಟಿಂಗ್ ಹಾಗೂ ಇನ್ನಾವುದೇ ಕೆಲಸಗಳಿಗೆ ತೊಂದರೆ ಉಂಟಾಗುವುದಿಲ್ಲ ಎಂದೂ ಹೇಳಿದ್ದಾರೆ. 

`ಜಂಝೀರ್' ಬಾಲಿವುಡ್‌ನ ಬಿಗ್-ಬಿ ಅಮಿತಾಭ್ ಬಚ್ಚನ್ ಅಭಿನಯಿಸಿದ ಚಿತ್ರದ ಮರುಸೃಷ್ಟಿ ಆಗಿದ್ದು, ಬಿಗ್-ಬಿ ನಟಿಸಿದ್ದ ಪೊಲೀಸ್ ಪಾತ್ರದಲ್ಲಿ ರಾಮ್‌ಚರಣ್ ಕಾಣಿಸಿಕೊಳ್ಳಲಿದ್ದಾರೆ. ಸೆ. 6ರಂದು ತೆರೆಕಾಣಲಿರುವ ಈ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ಸಂಜಯ್ ದತ್, ಪ್ರಕಾಶ್ ರಾಜ್ ಹಾಗೂ ಮಾಹಿ ಗಿಲ್ ಅಭಿನಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.