ADVERTISEMENT

ಸಂಕ್ಷಿಪ್ತ ಸಿನಿಮಾ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:30 IST
Last Updated 20 ಮಾರ್ಚ್ 2014, 19:30 IST

‘ಗಜಕೇಸರಿ’ ಡ್ಯಾನ್ಸ್
ಜಯಣ್ಣ ಹಾಗೂ ಭೋಗೇಂದ್ರ  ನಿರ್ಮಿಸುತ್ತಿರುವ ‘ಗಜಕೇಸರಿ’ ಚಿತ್ರಕ್ಕೆ ಯೋಗರಾಜಭಟ್ ಬರೆದಿರುವ ‘ಮನೇಲಿ ಅಪ್ಪ ಸ್ಕೂಲಲ್ಲಿ ಮೇಷ್ಟ್ರು ಆ ಕಡೆ ತಮ್ಮ ಈ ಕಡೆ ಅಮ್ಮ ...’ ಎಂಬ ಹಾಡಿನ ಚಿತ್ರೀಕರಣ ಕಂಠೀರವ ಹಾಗೂ ಅಭಿಮಾನ್ ಸ್ಟುಡಿಯೊದಲ್ಲಿ ಇತ್ತೀಚೆಗೆ ನಡೆಯಿತು. ನಾಯಕ ಯಶ್ ಹಾಗೂ ಸಹ ಕಲಾವಿದರು ಹಾಡಿಗೆ ಹೆಜ್ಜೆ ಹಾಕಿದರು. ಹರ್ಷ ನೃತ್ಯ ನಿರ್ದೇಶನ ಮಾಡಿದ್ದಾರೆ.

ಎಸ್. ಕೃಷ್ಣ ಕಥೆ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ. ಅಮೂಲ್ಯ. ಶ್ರೀನಿವಾಸ ಪ್ರಭು, ರಂಗಾಯಣ ರಘು, ಅಶೋಕ್, ಶಿವರಾಂ, ಸಾಧು ಕೋಕಿಲ ಇತರರು ಚಿತ್ರದಲ್ಲಿ ಇದ್ದಾರೆ.

ಏಪ್ರಿಲ್‌ನಲ್ಲಿ ‘ಮಿಸ್ ಮಲ್ಲಿಗೆ’
ಆಸ್ಕರ್ ಕೃಷ್ಣ ನಿರ್ದೇಶನದ ‘ಮಿಸ್ ಮಲ್ಲಿಗೆ’ ಚಿತ್ರೀಕರಣ ಪೂರ್ಣ ವಾಗಿದ್ದು ಶೀಘ್ರದಲ್ಲಿ ಮೊದಲ ಪ್ರತಿ ಹೊರಬರಲಿದೆ. ಏಪ್ರಿಲ್ ತಿಂಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. 

ಎಸ್. ನಾಗು ಸಂಗೀತ, ಸೂರ್ಯಕಾಂತ್ ಛಾಯಾಗ್ರಹಣ, ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಸಾಹಿತ್ಯ ಚಿತ್ರಕ್ಕಿದೆ. ರಂಜನ್ ಶೆಟ್ಟಿ, ರೂಪಾ ನಟರಾಜ್, ಶ್ವೇತಾ, ವಿಕ್ಟರಿ ವಾಸು ಇತರರು ಅಭಿನಯಿಸಿದ್ದಾರೆ.

ಡಬ್ಬಿಂಗ್‌ನಲ್ಲಿ ‘ಚಿರಾಯು’
ಪ್ರಶಾಂತ್ ನಟನೆ ಮತ್ತು ನಿರ್ದೇಶನದ ‘ಚಿರಾಯು’ ಚಿತ್ರದ ಡಬ್ಬಿಂಗ್ ಕಾರ್ಯ ನಡೆಯುತ್ತಿದೆ. ಬೆಂಗಳೂರು, ಮಂಗಳೂರು, ಹೊರನಾಡು, ಕಳಸ, ಸಕಲೇಶಪುರ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಶುಭಾ ಪೂಂಜಾ, ಅವಿನಾಶ್, ಮುನಿ, ಪವಿತ್ರಾ ಲೋಕೇಶ್, ರಾಮಕೃಷ್ಣ, ಪದ್ಮಾ ವಾಸಂತಿ, ನವೀನ್‌ ಕೃಷ್ಣ, ಮಾನಸಿ ಇತರರು ‘ಚಿರಾಯು’ ಚಿತ್ರದಲ್ಲಿ ನಟಿಸಿದ್ದಾರೆ.

ಮಡಿಕೇರಿಯಲ್ಲಿ ರವಿಚಂದ್ರನ್ ಹಾಡು ಪಾಡು
ರವಿಚಂದ್ರನ್ ನಾಯಕರಾಗಿ ಅಭಿನಯಿಸುತ್ತಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇದು ಮಲಯಾಳಂನ ‘ದೃಶ್ಯಂ’ ಚಿತ್ರದ ರೀಮೇಕ್. ಮುಖೇಶ್ ಆರ್. ಮೆಹತಾ ನಿರ್ಮಿಸುತ್ತಿರುವ, ಚಿತ್ರವನ್ನು ವಾಸು ನಿರ್ದೇಶಿಸುತ್ತಿದ್ದಾರೆ.

ಮಧು ನೀಲಕಂಠನ್ ಛಾಯಾಗ್ರಹಣ, ಇಳಯರಾಜ ಸಂಗೀತ, ಎಂ.ಎಸ್. ರಮೇಶ್ ಸಂಭಾಷಣೆ ಚಿತ್ರಕ್ಕಿದೆ. ನವ್ಯಾ ನಾಯರ್, ಶ್ರೀನಿವಾಸಮೂರ್ತಿ, ಅಚ್ಯುತ್‌ರಾವ್, ಸುಚೇಂದ್ರ ಪ್ರಸಾದ್, ಆಶಾ ಶರತ್, ಸಾಧು ಕೋಕಿಲ, ಸ್ವರೂಪಿಣಿ, ಪ್ರಭು ಇತರರು ತಾರಾಬಳಗದಲ್ಲಿದ್ದಾರೆ.

‘ಢಿಶುಂ ಢಿಶುಂ’ 60ರಷ್ಟು ಪೂರ್ಣ
ಓಂ ಪ್ರಕಾಶ್ ನಾಯಕ್ ನಿರ್ದೇಶನ ಮತ್ತು ನಟನೆಯ ‘ಢಿಶುಂ ಢಿಶುಂ’ ಚಿತ್ರದ ಶೇ. ೬೦ರಷ್ಷು ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ 15 ಸಾಹಸ ದೃಶ್ಯಗಳಿರುವುದು ವಿಶೇಷ. ಕವಿತಾ ಪ್ರಕಾಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಜಗನ್ ಬಾಬು ಛಾಯಾಗ್ರಹಣ, ಶಿವಕುಮಾರ್ ಸಂಕಲನವಿದೆ. ಗುಡಿಗೇರಿ, ಸೀನು, ವಿನಯಾ, ಶಶಿಕಲಾ, ಭಾರತಿ, ರೂಪಾಸಿಂಗ್, ಪ್ರಿನ್ಸ್ ಮತ್ತಿತರರು ಚಿತ್ರದಲ್ಲಿ ಇದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.