ADVERTISEMENT

ಸಿನಿಮಾ ಸುದ್ದಿ ಚೂರುಪಾರು

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 19:30 IST
Last Updated 27 ಅಕ್ಟೋಬರ್ 2011, 19:30 IST

ವಿನಾಯಕನೆದುರು `ಸ್ನೇಹಿತರು~
ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ `ಸ್ನೇಹಿತರು~ ಚಿತ್ರಕ್ಕೆ ಇತ್ತೀಚೆಗೆ ಮುಹೂರ್ತ ನೆರವೇರಿತು. ರಾಮ್‌ನಾರಾಯಣ್ ರಚನೆ ಹಾಗೂ ನಿರ್ದೆಶನದ ಈ ಚಿತ್ರಕ್ಕೆ ಮೈಸೂರು, ಸಕಲೇಶಪುರ, ಬೆಂಗಳೂರು, ಮಂಗಳೂರಿನಲ್ಲಿ 65 ದಿನಗಳ ಚಿತ್ರೀಕರಣ ನಡೆಯಲಿದೆ. 

 ವಿಜಯರಾಘವೇಂದ್ರ, ತರುಣ್‌ಚಂದ್ರ, ರವಿಶಂಕರ್, ಸೃಜನ್ ಲೋಕೇಶ್, ಪ್ರಣೀತಾ, ಮಾ.ಸ್ನೇಹಿತ್, ಶರಣ್, ರಮೇಶ್‌ಭಟ್, ಗಿರಿಜಾಲೋಕೇಶ್, ಶೋಭ್‌ರಾಜ್, ಬುಲೆಟ್‌ಪ್ರಕಾಶ್, ಸಾಧುಕೋಕಿಲಾ, ವಿ.ಮನೋಹರ್, ಮೋಹನ್‌ಜುನೇಜಾ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅತಿಥಿ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ, ಎಂ.ಆರ್.ಸೀನು ಛಾಯಾಗ್ರಹಣ, ಗಣೇಶ್.ಎಂ ಸಂಕಲನ, ತ್ರಿಭುವನ್, ಹರ್ಷ ನೃತ್ಯ ನಿರ್ದೇಶನ, ಪಳನಿರಾಜ್, ರವಿವರ್ಮ ಸಾಹಸ ನಿರ್ದೇಶನ ಹಾಗೂ ನಂಜುಂಡಸ್ವಾಮಿ ಕಲಾ ನಿರ್ದೇಶನ ಚಿತ್ರಕ್ಕಿದೆ.

ಮಾತಿನ ಮನೆಯಲ್ಲಿ `ನೆನಪಿನಂಗಳ~
ಜಿ.ರಾಮಕೃಷ್ಣಪ್ಪ, ಬಿ ರಾಮಾಂಜನಪ್ಪ ನಿರ್ಮಿಸುತ್ತಿರುವ `ನೆನಪಿನಂಗಳ~ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯುತ್ತಿದೆ. ಧನುಚಂದ್ರ ಮಾವಿನಕುಂಟೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಿ.ಆರ್.ಬಾಬ್ಬಿ ಸಂಗೀತ, ಜಿ. ರೇಣುಕುಮಾರ್ ಛಾಯಾಗ್ರಹಣ, ಕೌರವ ವೆಂಕಟೇಶ್ ಸಾಹಸ, ಸ್ಕೈಲೆನ್ ಕುಮಾರ್ ಸಂಕಲನ, ನಾಗೇಂದ್ರ ಪ್ರಸಾದ್, ಧನುಚಂದ್ರ ಸಾಹಿತ್ಯ, ಹೈಟ್ ಮಂಜು ನೃತ್ಯನಿರ್ದೇಶನ ಇದೆ. ತಾರಾಬಳಗದಲ್ಲಿ  ಹೇಮಂತ್, ಸುಪ್ರೀತಾ, ಕರಿಬಸವಯ್ಯ, ನೀನಾಸಂ ಅಶ್ವತ್ಥ್, ಚಂದ್ರು ಕಾರಂತ್, ಶಂಕರಭಟ್, ವಿಶ್ವ, ಕುರಿ ಸುನಿಲ್, ಚಿತ್ರಾ ಶೆಣೈ, ದೀಪು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ಕೆಳಗೂರಿನಲ್ಲಿ `ಸ್ತ್ರೀಶಕ್ತಿ~
ಚಿತ್ರದ ನಾಯಕಿ ಸ್ತ್ರೀಶಕ್ತಿ ಸ್ವಯಂ ಉದ್ಯೋಗ ಸಂಘವನ್ನು ಆರಂಭಿಸಿರುತ್ತಾಳೆ. ನಂತರ ನಾಯಕಿಗೆ ಮದುವೆಯಾಗುತ್ತದೆ. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಉದ್ಯೋಗಿಗಳಿಗೆ ಸಂಘದ ಜವಾಬ್ದಾರಿ ಒಪ್ಪಿಸಿ ನಾಯಕಿ ಗಂಡನ ಮನೆಗೆ ಹೋಗುತ್ತಾಳೆ.
 
ಸಂಘದ ಚಟುವಟಿಕೆಗಳು ಹೇಗೆ ನಡೆಯುತ್ತಿದೆ ಎಂದು ತಿಳಿಯಲು ನಾಯಕಿ ಸ್ವಲ್ಪ ದಿನಗಳ ನಂತರ ತವರಿಗೆ ಆಗಮಿಸುತ್ತಾಳೆ. ಈ ಸನ್ನಿವೇಶವನ್ನು `ಸ್ತ್ರೀಶಕ್ತಿ~ ಚಿತ್ರಕ್ಕಾಗಿ ಕೆಳಗೂರು ಟೀ ಎಸ್ಟೇಟ್‌ನಲ್ಲಿ ನಿರ್ದೇಶಕ ಎಸ್.ವಿ.ಸುರೇಶ್ ಚಿತ್ರಿಸಿಕೊಂಡರು. ಸೋನು ಮುಂತಾದ ಕಲಾವಿದರು ಈ ಭಾಗದ ಚಿತ್ರೀಕರಣದಲ್ಲಿದ್ದರು.

ವಿ.ಮನೋಹರ್ ಸಂಗೀತ, ಕೆ.ಶಶಿಧರ್ ಛಾಯಾಗ್ರಹಣ, ಬಿ.ಎಸ್.ಕೆಂಪರಾಜ್ ಸಂಕಲನ, ಹರ್ಷ ನೃತ್ಯ ನಿರ್ದೇಶನ, ಚಂದ್ರು ಸಾಹಸ ನಿರ್ದೇಶನ, ಅರುಣ್‌ಸಾಗರ್ ಕಲಾನಿರ್ದೇಶನ ಇರುವ ಈ ಚಿತ್ರಕ್ಕೆ ಹೊ.ನ.ಸತ್ಯ ಕಥೆ, ಸಂಭಾಷಣೆ ಬರೆದಿದ್ದಾರೆ.

ಚಿತ್ರದ ತಾರಾಬಳಗದಲ್ಲಿ ರಾಜೀವ್, ಸೋನು, ಶರತ್ ಲೋಹಿತಾಶ್ವ, ಸುಂದರರಾಜ್, ಗೋಪಿನಾಥ್‌ಭಟ್, ತುಳಸಿಶಿವಮಣಿ ಮುಂತಾದವರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.