ADVERTISEMENT

ಬಂಗಾಳಿ ನಟಿ ಬಿದಿಶಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮೇ 2022, 8:41 IST
Last Updated 26 ಮೇ 2022, 8:41 IST
ನಟಿ ಬಿದಿಶಾ (ಚಿತ್ರ: ಬಿದಿಶಾ ಇನ್‌ಸ್ಟಾಗ್ರಾಂ ಖಾತೆ: bidisha_de_majumder_official)
ನಟಿ ಬಿದಿಶಾ (ಚಿತ್ರ: ಬಿದಿಶಾ ಇನ್‌ಸ್ಟಾಗ್ರಾಂ ಖಾತೆ: bidisha_de_majumder_official)   

ಕೋಲ್ಕತ್ತ: ರೂಪದರ್ಶಿ, ಬಂಗಾಳಿ ನಟಿ ಬಿದಿಶಾ ಡಿ ಮಜುಂದಾರ್ ಅವರ ಮೃತದೇಹ ಬುಧವಾರ ಕೋಲ್ಕತ್ತಾದ ನಾಗರ್‌ಬಜಾರ್‌ನ ತಮ್ಮ ಫ್ಲಾಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

21 ವರ್ಷದ ಬಿದಿಶಾ ಕಳೆದ ನಾಲ್ಕು ತಿಂಗಳಿನಿಂದ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದರು.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿಯಲು ತನಿಖೆ ಆರಂಭಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ADVERTISEMENT

ಇನ್ನೊಂದೆಡೆ, ಫ್ಲಾಟ್‌ನಲ್ಲಿ ಡೆತ್‌ ನೋಟ್‌ ಪತ್ತೆಯಾಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.