ನವದೆಹಲಿ: ಹಲವು ವಿವಾದದ ಬಳಿಕ ತೆರೆಕಂಡ ಸಂಜಯ್ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತ್ ಚಿತ್ರ ಎರಡನೇ ವಾರಾಂತ್ಯಕ್ಕೆ ಬಾಕ್ಸ್ ಆಫೀಸ್ನಲ್ಲಿ ₹ 212 ಕೋಟಿ ಗಳಿಸಿ, ಮುನ್ನಡೆಯುತ್ತಿದೆ.
ನಟಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಈ ಚಿತ್ರ ಕೆಲವು ರಾಜ್ಯಗಳಲ್ಲಿ ತೆರೆ ಕಾಣದಿದ್ದರೂ ಎರಡನೇ ವಾರಾಂತ್ಯದ ದಿನಗಳಲ್ಲಿ ₹ 45 ಕೋಟಿ ಗಳಿಸಿದೆ.
ಎರಡನೇ ವಾರದಲ್ಲಿ ಶುಕ್ರವಾರ ₹ 10 ಕೋಟಿ, ಶನಿವಾರ 16 ಕೋಟಿ, ಭಾನುವಾರ 20 ಕೋಟಿ ಸೇರಿದಂತೆ ಒಟ್ಟು ₹ 212.50 ಕೋಟಿ ಗಳಿಕೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.