ADVERTISEMENT

ಐಪಿಎಲ್‌ನಲ್ಲಿ ಆಡಲು ನನಗೆ ಅವಕಾಶವಿದೆಯೇ: ಅಭಿಮಾನಿಗಳಿಗೆ ಅಮೀರ್ ಖಾನ್ ಪ್ರಶ್ನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2022, 11:18 IST
Last Updated 22 ಏಪ್ರಿಲ್ 2022, 11:18 IST
ಅಮೀರ್‌ ಖಾನ್‌
ಅಮೀರ್‌ ಖಾನ್‌   

ಬೆಂಗಳೂರು: ಬಾಲಿವುಡ್‌ ನಟ ಅಮೀರ್‌ ಖಾನ್‌ ಅವರ ಕ್ರಿಕೆಟ್‌ ಮೇಲಿನ ಅಭಿಮಾನ ನಮಗೆಲ್ಲ ತಿಳಿದೇ ಇದೆ. ಕ್ರಿಕೆಟ್‌ನ ಕಥಾಹಂದರವಿರುವ ‘ಲಗಾನ್‌’ ಚಿತ್ರದಲ್ಲಿನ ಅಮೀರ್‌ ನಟನೆ ಭಾರತೀಯರ ಮನಗಳಲ್ಲಿ ಹಸಿರಾಗಿಯೇ ಉಳಿದಿದೆ.

ಕ್ರಿಕೆಟ್‌ ಆಡುತ್ತಿರುವ ವಿಡಿಯೊವೊಂದನ್ನು ಅಮೀರ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಬ್ಯಾಟ್‌ ಮಾಡುತ್ತಿರುವ ಅಮೀರ್‌ ಶಾಟ್‌ ಹೊಡೆಯುತ್ತಾರೆ. ಆಗ ಜೊತೆಗಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ‘ನನಗೆ ಐಪಿಎಲ್‌ನಲ್ಲಿ ಅವಕಾಶ ಸಿಗಬಹುದೇ’ ಎಂದು ತಮಾಷೆಯಾಗಿ ಕೇಳಿದ್ದಾರೆ.

ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಛಡ್ಡಾ‘ ಚಿತ್ರ ತೆರೆಕಾಣಲು ಸಿದ್ಧವಾಗಿದೆ. ಲಾಲ್‌ ಸಿಂಗ್‌ ಚಡ್ಡಾ ಹಾಲಿವುಡ್‌ನ ‘ಫಾರೆಸ್ಟ್‌ ಗಂಪ್‌‘ ಚಿತ್ರದ ರಿಮೇಕ್‌ ಆಗಿದ್ದು, ಅಮೀರ್‌ ಅವರೊಂದಿಗೆ ಕರೀನಾ ಕಪೂರ್‌ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.