ADVERTISEMENT

RRR ಪ್ರಿ ರಿಲೀಸ್ ಇವೆಂಟ್‌: ‘ನಾಟು ನಾಟು‘ ಹಾಡಿಗೆ ಹೆಜ್ಜೆ ಹಾಕಿದ ಅಮೀರ್‌ ಖಾನ್‌

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2022, 9:43 IST
Last Updated 21 ಮಾರ್ಚ್ 2022, 9:43 IST
ಅಮೀರ್‌ ಖಾನ್‌ , ಎನ್‌ಟಿಆರ್‌, ರಾಮ್‌ ಚರಣ್‌
ಅಮೀರ್‌ ಖಾನ್‌ , ಎನ್‌ಟಿಆರ್‌, ರಾಮ್‌ ಚರಣ್‌   

ದೆಹಲಿ:ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ ಸಿನಿಮಾದ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಬಾಲಿವುಡ್‌ ನಟ ಅಮೀರ್‌ ಖಾನ್‌ ಅವರುಎನ್‌ಟಿಆರ್‌, ರಾಮ್‌ ಚರಣ್‌, ಆಲಿಯಾ ಭಟ್‌ ಅವರೊಂದಿಗೆ ‘ನಾಟು ನಾಟು‘ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

‘ಆರ್‌ಆರ್‌ಆರ್‌’ ಸಿನಿಮಾದಪ್ರಿ ರಿಲೀಸ್ ಇವೆಂಟ್‌ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಅಭಿಮಾನಿಗಳು ನೃತ್ಯ ಮಾಡುವಂತೆ ಒತ್ತಾಯಿಸಿದ್ದರಿಂದನಾಟು ನಾಟು ಹಾಡಿಗೆಎನ್‌ಟಿಆರ್‌, ರಾಮ್‌ ಚರಣ್‌, ಆಲಿಯಾ ಭಟ್‌ ಅವರೊಂದಿಗೆ ಹೆಜ್ಜೆ ಹಾಕಿದರು.

ಅಮೀರ್‌ ಖಾನ್‌ ನೃತ್ಯ ಮಾಡಿರುವ ವಿಡಿಯೊ ಹಾಗೂ ಫೋಟೊಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಕೆಲ ಅಭಿಮಾನಿಗಳು ಅಮೀರ್‌ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಆರ್‌ಆರ್‌ಆರ್‌’ ಸಿನಿಮಾವನ್ನು ₹ 336 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಬಜೆಟ್‌ನಲ್ಲಿ ನಟ, ನಟಿಯರ ಸಂಭಾವನೆ ಸೇರಿಲ್ಲ ಎಂದು ಚಿತ್ರತಂಡ ಹೇಳಿದೆ.

ಆರ್‌ಆರ್‌ಆರ್‌ ಸಿನಿಮಾಮಾರ್ಚ್ 25 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.