ADVERTISEMENT

ಅಮೀರ್‌ ಹೊಸ ಸ್ಟೈಲ್‌ಗೆ ಅಭಿಮಾನಿಗಳ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 8:24 IST
Last Updated 23 ಜೂನ್ 2020, 8:24 IST
   

ಸದಾ ಹೊಸತನ ಮತ್ತುವಿಭಿನ್ನ ಲುಕ್‌ನಿಂದ ಗಮನ ಸೆಳೆಯುವ ನಟ ಅಮೀರ್‌ ಖಾನ್ ಈ ಬಾರಿ ಬಿಳಿ ತಲೆಗೂದಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

‘ಅಪ್ಪಂದಿರ ದಿನ’ದಂದುಅಮೀರ್‌ ಖಾನ್‌ ಪುತ್ರಿ ಐರಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರದಲ್ಲಿ ನೆರೆ ಕೂದಲಿನ ಹೊಸ ಹೇರ್‌ಸ್ಟೈಲ್‌ನಲ್ಲಿ ಅಮೀರ್‌ ಗಮನ ಸೆಳೆಯುತ್ತಾರೆ. ‌ ‌

ಬ್ರ್ಯಾಂಡ್‌ ನ್ಯೂ ಗ್ರೇ ಹೇರ್‌ಸ್ಟೈಲ್‌ನಲ್ಲಿ ಅಮೀರ್ ವಿಭಿನ್ನವಾಗಿ ಕಾಣುತ್ತಾರೆ. ‘ಏನೇ ಮಾಡಿದರೂ ಹೊಸದಾಗಿ ಮತ್ತು ವಿಭಿನ್ನವಾಗಿ ಮಾಡುವುದು ಅಮೀರ್‌ ಗುಣ. ಪ್ರತಿ ಚಿತ್ರದಲ್ಲೂ ಅವರ ಲುಕ್‌, ಹೇರ್‌ಸ್ಟೈಲ್‌ ಕೂಡ ಭಿನ್ನವಾಗಿರುತ್ತದೆ‘ ಎಂದು ಅಭಿಮಾನಿಗಳು ಹೊಗಳಿದ್ದಾರೆ.

ADVERTISEMENT

ದಂಗಲ್‌ ಸಿನಿಮಾದಲ್ಲಿ ಅಮೀರ್‌ ಪುತ್ರಿಯರಾಗಿ ನಟಿಸಿದ್ದ ಫಾತೀಮಾ ಶೇಖ್‌ ಮತ್ತು ಸಾನ್ಯಾ ಮಲ್ಹೋತ್ರಾ ಕೂಡ ಅಮೀರ್ ಅವರ‌ ಹೊಸ ಕೇಶವಿನ್ಯಾಸವನ್ನು ಮೆಚ್ಚಿಕೊಂಡಿದ್ದಾರೆ.

ಕರೀನಾ ಕಪೂರ್ ಜತೆ ನಟಿಸಿರುವ ‘ಲಾಲ್ ಸಿಂಗ್‌ ಛಡ್ಡಾ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದು ಟಾಮ್‌ ಹಾಂಕ್ಸ್ ಅವರ ‘ಫಾರೆಸ್ಟ್‌ ಗಂಪ್‌’ ಚಿತ್ರದ ರಿಮೇಕ್‌. ಇದರಲ್ಲಿ ಆಮೀರ್‌ ಸಿಖ್‌ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.