ADVERTISEMENT

ನೂಪುರ್‌ ಶಿಖರೆಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಅಮೀರ್ ಪುತ್ರಿ ಇರಾ ಖಾನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2022, 6:43 IST
Last Updated 19 ನವೆಂಬರ್ 2022, 6:43 IST
ಇರಾ ಖಾನ್‌, ನೂಪುರ್‌
ಇರಾ ಖಾನ್‌, ನೂಪುರ್‌   

ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್‌ ಅಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಬಹುಕಾಲದ ಗೆಳೆಯ ನೂಪುರ್‌ ಶಿಖರೆ ಅವರೊಂದಿಗೆ ಶುಕ್ರವಾರ ರಾತ್ರಿನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಇಲ್ಲಿ ನಡೆದ ನಿಶ್ಚಿತಾರ್ಥದ ಸರಳ ಸಮಾರಂಭದಲ್ಲಿ ಅಮೀರ್‌ ಖಾನ್‌, ಅವರ ಮಾಜಿ ಪತ್ನಿಕಿರಣ್ ರಾವ್, ಅಳಿಯ ಇಮ್ರಾನ್ ಖಾನ್‌, ನಿರ್ದೇಶಕಅಶುತೋಷ್ ಗೌರಿಕರ್‌ ಸೇರಿದಂತೆ ಕುಟುಂಬದ ಸದಸ್ಯರು, ಸ್ನೇಹಿತರು, ಸಿನಿಮಾರಂಗದ ಗಣ್ಯರುಸಮಾರಂಭದಲ್ಲಿ ಭಾಗಿಯಾಗಿದ್ದರು.

ಇರಾ ಹಾಗೂ ನೂಪುರ್‌ ನಿಶ್ಚಿತಾರ್ಥ ಮಾಡಿಕೊಂಡಿರುವ ಪೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಅಭಿಮಾನಿಗಳು ಇವರಿಗೆ ಶುಭ ಕೋರುತ್ತಿದ್ದಾರೆ.

ADVERTISEMENT

ಈ ವಿಶೇಷ ದಿನದಂದು ಇರಾ ಕೆಂಪು ಬಣ್ಣದ ಉದ್ದನೆಯ ಗವನ್‌ನಲ್ಲಿ ಕಂಗೊಳಿಸುತ್ತಿದ್ದರು. ಇತ್ತ ನೂಪುರ್ ಕಪ್ಪು ಬಣ್ಣದ ಟುಕ್ಸೆಡೊ ಸೂಟ್‌ನಲ್ಲಿ ಮಿಂಚಿದರು.

ಕೆಲವು ದಿನಗಳ ಹಿಂದಷ್ಟೆ ಇರಾ, ನೂಪುರ್‌ ಸೈಕ್ಲಿಂಗ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಅಲ್ಲಿ ನೂಪುರ್ ಇರಾಗೆ ಪ್ರೇಮ ನಿವೇದನೆ ಮಾಡಿದ್ದರು.

ನೂಪುರ್‌ ಫಿಟ್ನೆಸ್ ಎಕ್ಸ್‌ಪರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಇರಾ ಮತ್ತು ನೂಪುರ್‌ ಕಳೆದರೆಡು ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.