ADVERTISEMENT

ಅಮೀರ್‌ ಮನೆಕೆಲಸದ ಸಿಬ್ಬಂದಿಗೆ ಕೊರೊನಾ ಸೋಂಕು

ಪ್ರಜಾವಾಣಿ ವಿಶೇಷ
Published 30 ಜೂನ್ 2020, 13:14 IST
Last Updated 30 ಜೂನ್ 2020, 13:14 IST
ಅಮೀರ್‌
ಅಮೀರ್‌   

ಬಾಲಿವುಡ್‌ ನಟ ಅಮೀರ್ ಖಾನ್ ಅವರ‌ ಮನೆ ಕೆಲಸದ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕು ದೃಢಪಟ್ಟ ಕೂಡಲೇ ಅವರೆಲ್ಲರೂ ಹೋಂ ಕ್ವಾರಂಟೈನ್ ಆಗಿದ್ದಾರೆ ಎಂದು ಅಮೀರ್‌ ಸ್ಪಷ್ಟಪಡಿಸಿದ್ದಾರೆ.

ಅಮೀರ್‌ ಖಾನ್‌ ಕುಟುಂಬ ಸದಸ್ಯರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದು, ಪರೀಕ್ಷೆಗೆ ಒಳಗಾದ ಎಲ್ಲಾ ಸದಸ್ಯರ ವರದಿ ನೆಗೆಟಿವ್‌ ಬಂದಿದೆ. ಆದರೆ ಅಮೀರ್‌ ಅಮ್ಮ ಮಾತ್ರ ಇನ್ನೂ ಪರೀಕ್ಷೆಗೆ ಮಾಡಿಸಿಕೊಳ್ಳಬೇಕಿದೆ.

ಈ ವಿಚಾರವನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಅಮೀರ್‌ ಖಾನ್‌ ಹಂಚಿಕೊಂಡಿದ್ದು, ‘ನನ್ನ ಮನೆಯಲ್ಲಿ ಕೆಲಸ ಮಾಡುವ ಕೆಲ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರು ತಕ್ಷಣವೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಬೃಹತ್‌‌ ಮುಂಬೈ ಮಹಾನಗರ ಪಾಲಿಕೆ‌‌ ಅಧಿಕಾರಿಗಳು ಅವರನ್ನು ವೈದ್ಯಕೀಯ ಪರೀಕ್ಷೆಗೆ ಕರೆದುಕೊಂಡು ಹೋದರು. ಕಾಳಜಿ ಮಾಡಿದ, ನಮ್ಮ ಸುತ್ತ ಪರಿಸರವನ್ನು ದ್ರಾವಣ ಸಿಂಪಡಿಸಿ ಸೋಂಕುಮುಕ್ತ ಮಾಡಿದ್ದಕ್ಕೆ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ನಾವೆಲ್ಲರೂ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಂಡಿದ್ದು, ನೆಗೆಟಿವ್‌ ವರದಿ ಬಂದಿದೆ. ಅಮ್ಮನನ್ನು ಪರೀಕ್ಷೆಗೆ ಇನ್ನಷ್ಟೇ ಕರೆದುಕೊಂಡು ಹೋಗಬೇಕು. ಆಕೆಗಾಗಿ ಎಲ್ಲರೂ ಪ್ರಾರ್ಥಿಸಿ’ ಎಂದು ಅವರು ಬರೆದಿದ್ದಾರೆ.

ADVERTISEMENT

ಪೋಸ್ಟ್‌ನಲ್ಲಿ ತಮ್ಮ ಕೊರೊನಾ ಪರೀಕ್ಷೆ ನಡೆಸಿದ ಕೋಕಿಲಾಬೆನ್‌ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು ಹಾಗೂ ಸಿಬ್ಬಂದಿಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಅಮೀರ್‌ ಖಾನ್‌ ಪತ್ನಿ ಕಿರಣ್‌ ರಾವ್‌ ಹಾಗೂ ಮಗ ಅಜಾದ್‌ ರಾವ್‌ ಖಾನ್‌ ಜೊತೆ ಮುಂಬೈನ ಮನೆಯಲ್ಲಿ ವಾಸವಾಗಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಈಗ ಅವರ ಜೊತೆ ಮೊದಲ ಪತ್ನಿಯ ಮಗಳು ಇರಾ ಕೂಡ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.