ADVERTISEMENT

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಘವ್‌ ಚಡ್ಡಾ– ಪರಿಣಿತಿ ಚೋಪ್ರಾ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಸೆಪ್ಟೆಂಬರ್ 2023, 16:16 IST
Last Updated 24 ಸೆಪ್ಟೆಂಬರ್ 2023, 16:16 IST
<div class="paragraphs"><p>ಇನ್‌ಸ್ಟಾಗ್ರಾಮ್‌ ಚಿತ್ರ</p></div>

ಇನ್‌ಸ್ಟಾಗ್ರಾಮ್‌ ಚಿತ್ರ

   

ಉದಯಪುರ: ಆಪ್‌ ಮುಖಂಡ ರಾಘವ್‌ ಚಡ್ಡಾ ಮತ್ತು ಬಾಲಿವುಡ್‌ ನಟಿ ಪರಿಣಿತಿ ಚೋಪ್ರಾ ಇಂದು (ಸೆ.24) ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಉದಯಪುರದ ಲೀಲಾ ‌ಪ್ಯಾಲೇಸ್‌ನಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ರಾಘವ್‌ ಮತ್ತು ಪರಿಣಿತಿ ವಿವಾಹವಾಗಿದ್ದಾರೆ. ಈ ಬಗ್ಗೆ ಅವರು ಇನ್ನಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳನ್ನು‌ ಹಂಚಿಕೊಳ್ಳಬೇಕಿದೆ. 

ಮದುವೆಗೆ ಪರಿಣಿತಿ ಅವರ ಉಡುಗೆಯನ್ನು ಮನೀಶ್‌ ಮಲ್ಹೋತ್ರಾ ಡಿಸೈನ್‌ ಮಾಡಿದ್ದಾರೆ ಎನ್ನಲಾಗಿದ್ದು, ಮದುವೆ ಫೋಟೊಗಳನ್ನು ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. 

ADVERTISEMENT

ಅಲಂಕರಿಸಿದ ಬೋಟ್‌ನಲ್ಲಿ ವಧು –ವರರು ಲೀಲಾ ಪ್ಯಾಲೇಸ್‌ಗೆ ಆಗಮಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ವಿವಾಹ ಸಮಾರಂಭದಲ್ಲಿ ದೆಹಲಿ ಮುಖ್ಯಮಂತ್ರಿ  ಅರವಿಂದ್‌ ಕೇಜ್ರಿವಾಲ್‌, ಪಂಜಾಬ್‌ ಮುಖ್ಯ ಮಂತ್ರಿ ಭಗವಂತ್‌ ಮನ್‌ ಸೇರಿದಂತೆ ಹಲವು ರಾಜಕೀಯ ನಾಯಕರು ಬಾಲಿವುಡ್‌ ಚಿತ್ರರಂಗದ ಕಲಾವಿದರು ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.