ADVERTISEMENT

ಮರಾಠಿ ನಟಿ ಅಭಿಲಾಷಾ ಪಾಟೀಲ್‌ ನಿಧನ

​ಪ್ರಜಾವಾಣಿ ವಾರ್ತೆ
Published 6 ಮೇ 2021, 10:25 IST
Last Updated 6 ಮೇ 2021, 10:25 IST
ಅಭಿಲಾಷಾ ಪಾಟೀಲ್‌
ಅಭಿಲಾಷಾ ಪಾಟೀಲ್‌   

ಮುಂಬೈ: ಮರಾಠಿ ಚಿತ್ರಗಳ ಪೋಷಕ ನಟಿ ಅಭಿಲಾಷಾ ಪಾಟೀಲ್‌ (40) ಅವರು ಗುರುವಾರ ನಿಧನರಾದರು. ಮರಾಠಿ ಜನಪ್ರಿಯ ಚಲನಚಿತ್ರಗಳಾದ ‘ತುಜಾ ಮಂಜಾ ಅರೇಂಜ್ ಮ್ಯಾರೇಜ್’, ‘ಬೇಕೊ ದೇತಾ ಕಾ ಬೈಕೊ’, ‘ಪಿಪ್ಸಿ’ ಮುಂತಾದವುಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್‌ನ ‘ಬದ್ರೀನಾಥ್ ಕಿ ದುಲ್ಹಾನಿಯಾ’, ‘ಗುಡ್ ನ್ಯೂಜ್’, ಮತ್ತು ‘ಚಿಚೋರೆ’ಯಂತಹ ಅನೇಕ ಜನಪ್ರಿಯ ಚಿತ್ರಗಳಲ್ಲೂ ಅವರು ನಟಿಸಿದ್ದರು.ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೊತೆಗೂ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅವರಿಗೆ ಪತಿ ಮತ್ತು ಪುತ್ರ ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.