ADVERTISEMENT

ನಟ ಅರ್ಜುನ್ ರಾಂಪಾಲ್ ಗೆಳತಿಗೆ ಮದುವೆಯಾಗಿ ಎಂದ ವ್ಯಕ್ತಿ

ಐಎಎನ್ಎಸ್
Published 6 ಜೂನ್ 2023, 11:45 IST
Last Updated 6 ಜೂನ್ 2023, 11:45 IST
ಚಿತ್ರಕೃಪೆ: ಇನ್‌ಸ್ಟಾಗ್ರಾಮ್
ಚಿತ್ರಕೃಪೆ: ಇನ್‌ಸ್ಟಾಗ್ರಾಮ್    

ಮುಂಬೈ: ಬಾಲಿವುಡ್‌ ನಟ ಅರ್ಜುನ್ ರಾಂಪಾಲ್ ಅವರ ಗೆಳತಿ ಮತ್ತು ಮಾಡೆಲ್‌ ಗೇಬ್ರಿಯೆಲಾ ಡಿಮೆಟ್ರಿಯಾಡ್ಸ್ ಅವರು ಟ್ರೋಲ್‌ಗೆ ಪ್ರತಿಕ್ರಿಯಿಸಿದ್ದಾರೆ.

ಅರ್ಜುನ್ ರಾಂಪಾಲ್‌ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಗೇಬ್ರಿಯೆಲಾ, ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕೆಲವೊಂದು ಚಿತ್ರಗಳನ್ನು ಹಂಚಿಕೊಂಡು ವಿಕೇಂಡ್‌ ಫೋಟೊಗಳು ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ವ್ಯಕ್ತಿಯೊಬ್ಬ, ನೀವು ಯಾವಾಗ ಮದುವೆಯಾಗುತ್ತೀರಿ, ನೀವು ನೆಲೆಸಿರುವುದು ಭಾರತದಲ್ಲಿ ಎಂದು ಪ್ರಶ್ನಿಸಿದ್ದಾರೆ. ಯುವಜನತೆಯ ಮನಸ್ಥಿತಿಯನ್ನು ಹಾಳು ಮಾಡಿತ್ತಿದ್ದಿರಿ ಎಂದಿದ್ದರು.

ADVERTISEMENT

ಸುಂದರ ಆತ್ಮಗಳನ್ನು ಜಗತ್ತಿಗೆ ತರುವುದು ತಪ್ಪು, ಸಣ್ಣ ಮನಸ್ಸಿನ ಮತಾಂಧರಲ್ಲ ಎಂಬುದು ಇಲ್ಲಿನ ಮನಸ್ಥಿತಿ ಎಂದು ಅವರು ತಿರುಗೇಟು ನೀಡಿದ್ದಾರೆ.

ಅರ್ಜುನ್ ಮತ್ತು ಗೇಬ್ರಿಯೆಲಾ 2018 ರಲ್ಲಿ ಡೇಟಿಂಗ್ ಪ್ರಾರಂಭಿಸಿದ್ದರು. ಈ ಜೋಡಿಗೆ ಅರಿಕ್ ರಾಂಪಾಲ್ ಎಂಬ ಮಗು ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.