ADVERTISEMENT

ಫೆ. 2ರಂದು ಅನಾಥಾಶ್ರಮದಲ್ಲಿ ನಟ ಚೇತನ್‌ ವಿವಾಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 6:29 IST
Last Updated 21 ಜನವರಿ 2020, 6:29 IST
ಚೇತನ್‌
ಚೇತನ್‌   

ಬೆಂಗಳೂರು: ಆ ದಿನಗಳು ಮತ್ತು ಮೈನಾ ಸಿನಿಮಾ ಖ್ಯಾತಿಯ ನಟ ಚೇತನ್‌ ವಿವಾಹ ನಿಶ್ಚಯವಾಗಿರುವುದು ಗೊತ್ತಿರುವ ಸಂಗತಿ. ಇದೀಗ ಅವರ ವಿವಾಹದ ದಿನಾಂಕ ನಿಗದಿಯಾಗಿದೆ.

ಬರುವ ಫೆಬ್ರುವರಿ 2ರ ಭಾನುವಾರ ಸಂಜೆನಟ ಚೇತನ್‌ ಹಾಗೂಮೇಘಾ ಎಸ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವೃತ್ತಿಯಲ್ಲಿ ಎಂಜಿನಿಯರ್‌ ಆಗಿರುವ ಮೇಘಾ ಮತ್ತು ಚೇತನ್‌ ಪರಸ್ಪರ ಪ್ರೀತಿಸುತ್ತಿದ್ದರು.

ADVERTISEMENT

ಅನಾಥಶ್ರಮವೊಂದರಲ್ಲಿ ಸರಳವಾಗಿ ವಿವಾಹವಾಗಲಿದ್ದಾರೆ ಎಂದು ಚೇತನ್‌ ಆಪ್ತರು ತಿಳಿಸಿದ್ದಾರೆ. ಸರಳ ಮದುವೆ ಸಮಾರಂಭದಲ್ಲಿ ವಚನ ಗಾಯನ, ಸೂಫಿ ಗಾಯನ ಸೇರಿದಂತೆ ದೇಶಿ ನೃತ್ಯಗಳ ಕಾರ್ಯಕ್ರಮಗಳು ಇರಲಿವೆ.

ಈಗಾಗಲೇ ಚೇತನ್‌ ಕನ್ನಡ ಸಿನಿಮಾರಂಗದ ಗಣ್ಯರನ್ನು ಮದುವೆಗೆ ಆಮಂತ್ರಣ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಆಮಂತ್ರಣ ನೀಡಿರುವ ಬಗ್ಗೆ ಚೇತನ್‌ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

2007ರಲ್ಲಿ ಆ ದಿನಗಳು ಸಿನಿಮಾದ ಮೂಲಕ ಚೇತನ್‌ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮೊದಲ ಚಿತ್ರದಲ್ಲೇ ಚೇತನ್‌ ಭರವಸೆ ಮೂಡಿಸಿದ್ದರು. ಸಿನಿಮಾದ ಜೊತೆ ಜೊತೆಗೆ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.