ADVERTISEMENT

ಕ್ರೇಜಿಸ್ಟಾರ್ ರವಿಚಂದ್ರ ತಾಯಿ ಪಟ್ಟಮ್ಮಾಳ್ ವೀರಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2022, 4:15 IST
Last Updated 28 ಫೆಬ್ರುವರಿ 2022, 4:15 IST
   

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರ ವಿ. ಅವರ ತಾಯಿ ಪಟ್ಟಮ್ಮಾಳ್ವೀರಸ್ವಾಮಿ (83) ಸೋಮವಾರ ನಿಧನರಾಗಿದ್ದಾರೆ.

ಸಿನಿಮಾ ನಿರ್ಮಾಪಕ ಎನ್. ವೀರಸ್ವಾಮಿ ಅವರ ಪತ್ನಿ ಪಟ್ಟಮ್ಮಾಳ್ ಅವರು ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಸುಗುಣ ಆಸ್ಪತ್ರೆಯಲ್ಲಿ ಬೆಳಗ್ಗೆ 6.30ರ ಸುಮಾರಿಗೆ ಕೊನೆಯುಸಿರೆಳೆದಿರುವ ಪಟ್ಟಮಾಳ್ ಅವರ ಪಾರ್ಥಿವ ಶರೀರವನ್ನು10.30ಕ್ಕೆ ರವಿಚಂದ್ರ ಅವರ ಮನೆಗೆ ತರಲಾಗುತ್ತದೆ. ಸಂಜೆ ವೇಳೆ ಅಂತ್ಯಕ್ರಿಯೆ ನಡೆಯಲಿದೆ.

ADVERTISEMENT

ನಟ ರವಿಚಂದ್ರ ಸೇರಿದಂತೆ ಇಬ್ಬರು ಗಂಡು ಮಕ್ಕಳು ಹಾಗೂ ಮೂವರು ಹೆಣ್ಣು ಮಕ್ಕಳನ್ನು ಪಟ್ಟಮ್ಮಾಳ್ ಅವರು ಅಗಲಿದ್ದಾರೆ.

ಅವರಿಗೆಕಳೆದ ಹತ್ತು ವರ್ಷಗಳಿಂದ ಮರೆವಿನ ಕಾಯಿಲೆಯೂ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.