ADVERTISEMENT

Happy Birthday Darshan: 45ನೇ ಜನ್ಮದಿನದ ಸಂಭ್ರಮದಲ್ಲಿ ಚಾಲೆಂಜಿಂಗ್‌ ಸ್ಟಾರ್‌

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 7:10 IST
Last Updated 16 ಫೆಬ್ರುವರಿ 2022, 7:10 IST
ದರ್ಶನ್‌ ( ಅಭಿಮಾನಿಗಳು ಮಾಡಿರುವ ಪೋಸ್ಟರ್‌/ ಟ್ವಟರ್‌ ಕೃಪೆ)
ದರ್ಶನ್‌ ( ಅಭಿಮಾನಿಗಳು ಮಾಡಿರುವ ಪೋಸ್ಟರ್‌/ ಟ್ವಟರ್‌ ಕೃಪೆ)   

ಬೆಂಗಳೂರು: ಚಂದನವನದ ಖ್ಯಾತ ನಟ ದರ್ಶನ್‌ ಅವರಿಗೆಇಂದು (ಫೆ.16) 45ನೇ ವರ್ಷದ ಜನ್ಮದಿನಸಂಭ್ರಮ.

ದರ್ಶನ್‌ ಅವರಿಗೆ ಅಭಿಮಾನಿಗಳು, ಸಿನಿಮಾರಂಗದ ಗಣ್ಯರು ಸೇರಿದಂತೆ ಲಕ್ಷಾಂತರ ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಟ್ವಿಟರ್‌ನಲ್ಲಿ #happybirthdaydarshan #dboss ಟ್ರೆಂಡ್‌ ಆಗಿವೆ.

ಕೋವಿಡ್‌ ಕಾರಣದಿಂದಈ ಬಾರಿಯೂಸರಳವಾಗಿ ಜನ್ಮದಿನ ಆಚರಿಸಿಕೊಳ್ಳುವುದಾಗಿ ದರ್ಶನ್‌ ಹೇಳಿದ್ದಾರೆ. ಈ ಬಗ್ಗೆ ವಿಡಿಯೊ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

‘ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್‌ ತೂಗುದೀಪ ಮಾಡುವ ವಿನಂತಿ. ಕೊರೊನಾ ಕಾರಣದಿಂದ ಈ ವರ್ಷ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದೇನೆ. ನಾನು ಊರಿನಲ್ಲಿ ಇರುವುದಿಲ್ಲ. ಯಾರೂ ಮನೆಯ ಹತ್ತಿರ ಬಂದು ನಿರಾಶರಾಗಬೇಡಿ ಎಂದು ದರ್ಶನ್‌ ನಲ್ಮೆಯ ಅಭಿಮಾನಿಗಳಿಗೆ ಹೇಳಿದ್ದಾರೆ.

ಇದೇ ವಿಡಿಯೊದಲ್ಲಿ ಮೆಜೆಸ್ಟಿಕ್‌ ಹಾಗೂ ನೂತನ ’ಕ್ರಾಂತಿ’ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ದಶರ್ನ್‌ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಬೇಕು ಎಂದುಕೊಂಡಿದ್ದ ಡಿಬಾಸ್‌ ಅಭಿಮಾನಿಗಳಿಗೆ ಈ ಬಾರಿಯೂ ನಿರಾಸೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.