
ದಿನೇಶ್, ಸಂಭ್ರಮಶ್ರೀ
ನಟ ದಿನೇಶ್ ಕುಮಾರ್ ಅವರ ನಿರ್ಮಾಣದ ಹಾಗೂ ನಿರ್ದೇಶನದ ‘ಸೂರಿ ಅಣ್ಣ’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಯಿತು.
ಹರೀಶ್ ರಾಯ್ ನಟಸಿರುವ ಕೊನೆಯ ಚಿತ್ರ ಇದಾಗಿದೆ. ‘ಸಲಗ’ ಚಿತ್ರದಿಂದ ‘ಸೂರಿ ಅಣ್ಣ’ ಎಂದೆ ಖ್ಯಾತರಾಗಿರುವ ದಿನೇಶ್ ಮಾತನಾಡಿ, ‘ಫೆ.20ಕ್ಕೆ ‘ಸೂರಿ ಅಣ್ಣ’ ರಿಲೀಸ್ ಆಗುತ್ತಿದೆ. ಚಿತ್ರಕ್ಕಾಗಿ ಕಳೆದ ಆರು ವರ್ಷದಿಂದ ಕಷ್ಟಪಟ್ಟಿದ್ದೇನೆ. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲಿದ್ದೇನೆ. ಜಯಣ್ಣ ಫಿಲಂಸ್‌ನ ಜಯಣ್ಣ ಅವರು ಚಿತ್ರವನ್ನು ಬಿಡುಗಡೆ ಮಾಡಿಕೊಡುತ್ತಿದ್ದಾರೆ. ಯಾರೂ ಈ ರೌಡಿಸಂಗೆ ಬರಬೇಡಿ ಎಂಬುವುದನ್ನು ಚಿತ್ರದಲ್ಲಿ ತೋರಿಸಿದ್ದೇನೆ’ ಎಂದರು.
ದಿನೇಶ್ ಅವರಿಗೆ ಜೋಡಿಯಾಗಿ ಸಂಭ್ರಮಶ್ರೀ ನಟಿಸಿದ್ದಾರೆ. ಪ್ರವೀಣ್, ಜಾಕ್ ಜಾಲಿ, ಪ್ರಸಾದ್, ಕಾಮರಾಜ್, ಹೊನ್ನವಳ್ಳಿ ಕೃಷ್ಣ, ಪ್ರಕಾಶ್ ತೂಮಿನಾಡು, ರೇಖಾದಾಸ್, ಕಾಕ್ರೋಚ್ ಸುಧಿ, ವಿನಯ್ ಗೌಡ ತಾರಾಬಳಗದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.