@shihanhussaini
ಚೆನ್ನೈ: ತಮಿಳು ನಟ, ಕರಾಟೆ ದಂತಕಥೆ ಶಿಹಾನ್ ಹುಸೇನಿ ಅವರು ಇಂದು (ಮಂಗಳವಾರ) ನಿಧನರಾದರು. ಅವರಿಗೆ 60 ವರ್ಷ ವಯಸ್ಸಾಗಿತ್ತು.
ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಹುಸೇನಿ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ.
'ತಮಿಳುನಾಡು ಆರ್ಚರಿ ಸಂಘದ (ಟಿಎಎಟಿ) ಸ್ಥಾಪಕ ಹುಸೇನಿ ಅವರನ್ನು ಕಳೆದುಕೊಂಡಿರುವುದು ನೋವಿನ ಸಂಗತಿ. ರಕ್ತದ ಕ್ಯಾನ್ಸರ್‌ನಿಂದ ಹೋರಾಡಿದ ಅವರು, ನಮ್ಮನ್ನು ಬಿಟ್ಟು ಅಗಲಿದ್ದಾರೆ' ಎಂದು ಟಿಎಎಟಿ ವಕ್ತಾರ ಅಶ್ವಿನ್ ಕುಮಾರ್ ಅಯ್ಯರ್ ಸಂತಾಪ ಸೂಚಿಸಿದ್ದಾರೆ.
ಲ್ಯುಕೇಮಿಯಾದೊಂದಿಗೆ ಹೋರಾಟ ನಡೆಸಿದ್ದ ಹುಸೇನಿಯ ದೇಹವನ್ನು ಹೆಚ್ಚಿನ ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲಾಗಿದೆ ಎಂದು ಅಯ್ಯರ್ ತಿಳಿಸಿದ್ದಾರೆ.
ಕರಾಟೆ ತರಬೇತುದಾರರಾಗಿ ಹುಸೇನಿ ಖ್ಯಾತಿಯನ್ನು ಗಳಿಸಿದ್ದರು. 1986ರಲ್ಲಿ ಕಮಲ್ ಹಾಸನ್ ಅವರ ಪುನ್ನಗೈ ಮನ್ನನ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ್ದರು. ರಜನಿಕಾಂತ್ ಅವರ ವೆಲೈಕರಣ್ ಚಿತ್ರದಲ್ಲಿ ನಟಿಸಿದ್ದರು.
ಹುಸೇನಿ ಅವರು ಬ್ಲಡ್‌ಸ್ಟೋನ್, ಉನ್ನೈ ಸೊಲ್ಲಿ ಕುಟ್ರಮಿಲ್ಲೈ, ಬದ್ರಿ, ಕಾತುವಾಕುಲಾ ರೆಂಡು ಕಾದಲ್, ಚೆನ್ನೈ ಸಿಟಿ ಗ್ಯಾಂಗ್‌ಸ್ಟರ್ಸ್ ಮತ್ತು ವೇದನ್ ಚಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.