ADVERTISEMENT

‘ಪುಷ್ಪಾ’ ಸಿನಿಮಾದಲ್ಲಿ ನಟಿಸುತ್ತಿಲ್ಲ: ಮಾಧವನ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 11:51 IST
Last Updated 30 ಸೆಪ್ಟೆಂಬರ್ 2020, 11:51 IST
ಮಾಧವನ್
ಮಾಧವನ್   

ನಟ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪಾ’ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಗಳು ಹುಟ್ಟಿಕೊಳ್ಳುತ್ತಿವೆ. ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶನದ ‘ಪುಷ್ಪಾ’ ಸಿನಿಮಾ ಫಸ್ಟ್‌ಲುಕ್ ಮೂಲಕ ತುಂಬಾನೇ ನಿರೀಕ್ಷೆ ಹುಟ್ಟುಹಾಕಿತ್ತು. ಅಲ್ಲದೇ ಸಿನಿಮಾದ ಕುರಿತು ದಿನಕ್ಕೊಂದು ಊಹಾಪೋಹಗಳು ಕೇಳಿ ಬರುತ್ತಲೇ ಇವೆ.

ಈ ಚಿತ್ರವು ರಕ್ತಚಂದನದ ಕಳ್ಳಸಾಗಣೆ ಆಧಾರಿತ ಕತೆಯನ್ನು ಹೊಂದಿದ್ದು ಅಲ್ಲು ಅರ್ಜುನ್ ಲಾರಿ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅವರಿಗೆ ಎದುರಾಳಿಯಾಗಿ ತಮಿಳು ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಈಗ ವಿಜಯ್ ಸೇತುಪತಿ ಈ ಪಾತ್ರದಲ್ಲಿ ನಟಿಸುವುದು ಅನುಮಾನವಾಗಿದೆ.

ಕೆಲ ದಿನಗಳ ಹಿಂದೆ ಈ ಸಿನಿಮಾದ ಬಗ್ಗೆ ಕೇಳಿದ ನಟ ಮಾಧವನ್‌ ಸಿನಿಮಾದ ಕುರಿತು ಹೊಗಳಿಕೆಯ ಮಾತುಗಳನ್ನಾಡಿದ್ದರು. ಆ ಕಾರಣಕ್ಕೆ ವಿಜಯ್ ಸೇತುಪತಿ ಜಾಗಕ್ಕೆ ಮಾಧವನ್ ಆಯ್ಕೆ ಆಗಿದ್ದಾರೆ ಎಂಬ ಸುದ್ದಿಯೂ ಹೊರ ಬಂದಿತ್ತು. ಆದರೆ ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿರುವ ಮಾಧವನ್ ‘ನಾನು ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿಲ್ಲ. ಅದೆಲ್ಲಾ ಗಾಳಿಸುದ್ದಿ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಈ ಸಿನಿಮಾದಲ್ಲಿ ಬನ್ನಿಗೆ ಎದುರಾಳಿ ಯಾರು ಎಂಬ ಊಹಾಪೋಹಗಳ ಬಗ್ಗೆ ಚಿತ್ರತಂಡವೇ ತೆರೆ ಎಳೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.