ADVERTISEMENT

ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಸೆಪ್ಟೆಂಬರ್ 2022, 4:16 IST
Last Updated 28 ಸೆಪ್ಟೆಂಬರ್ 2022, 4:16 IST
ಇಂದಿರಾ ದೇವಿ
ಇಂದಿರಾ ದೇವಿ   

ಹೈದರಾಬಾದ್‌:ತೆಲುಗಿನ ಖ್ಯಾತ ನಟಮಹೇಶ್ ಬಾಬು ಅವರ ತಾಯಿ ಇಂದಿರಾ ದೇವಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಹಲವು ದಿನಗಳಿಂದ ಇಂದಿರಾ ದೇವಿ ಅವರು ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬುಧವಾರ ಬೆಳಗ್ಗೆ 4 ಗಂಟೆಗೆ ಇಂದಿರಾ ದೇವಿ ನಿಧನರಾದರು ಎಂದುಮಹೇಶ್ ಬಾಬುಕುಟುಂಬದವರು ತಿಳಿಸಿದ್ದಾರೆ.

ಅವರ ಅಗಲಿಕೆಗೆಆಪ್ತರು, ಗೆಳೆಯರು, ಸಿನಿಮಾ ಸೆಲೆಬ್ರಿಟಿಗಳು ಸೇರಿದಂತೆ ಮಹೇಶ್‌ ಬಾಬು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೂಲಕ ಸಂತಾಪ ಸೂಚಿಸುತ್ತಿದ್ದಾರೆ.

ಮಹೇಶ್ ಬಾಬು ತಂದೆ ಕೃಷ್ಣ ಅವರು 70– 80ರ ದಶಕದಲ್ಲಿ ತೆಲುಗು ಸಿನಿಮಾಗಳಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದರು. ಈ ವರ್ಷ ಆರಂಭದಲ್ಲಿ ಅವರ ಹಿರಿಯ ಪುತ್ರ ರಮೇಶ್ ಬಾಬು ಕೊನೆಯುಸಿರೆಳೆದಿದ್ದರು. ಈಗ ಕೃಷ್ಣ ಪತ್ನಿ ಇಂದಿರಾ ದೇವಿ ನಿಧನದಿಂದ ಇಡೀ ಕುಟುಂಬದಲ್ಲಿ ಶೋಕ ಆವರಿಸಿದೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಮಹೇಶ್ ಬಾಬು ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.

ADVERTISEMENT

ಇಂದಿರಾ ದೇವಿ ಅವರ ಅಂತ್ಯಸಂಸ್ಕಾರ ಮಧ್ಯಾಹ್ನ 12 ಗಂಟೆ ನಂತರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.