ಮದುವೆಯಾದ ನಾಗಚೈತನ್ಯ– ಶೋಭಿತಾ
ನವದೆಹಲಿ: ಹೈದರಾಬಾದ್‌ನಲ್ಲಿ ನಟ ನಾಗಚೈತನ್ಯ ಮತ್ತು ಶೋಭಿತಾ ಧೂಲಿಪಾಲ ಅವರ ವಿವಾಹ ಅದ್ದೂರಿಯಾಗಿ ಬುಧವಾರ ಜರುಗಿತು.
ನಾಗಚೈತನ್ಯ ಅವರ ಕುಟುಂಬದ ಅನ್ನಪೂರ್ಣ ಸ್ಟೂಡಿಯೋಸ್‌ನಲ್ಲಿ ಮದುವೆ ಕಾರ್ಯಗಳು ನಡೆದವು.
ಈ ಕುರಿತು ನಾಗಾರ್ಜುನ ಅಕ್ಕಿನೇನಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಟೊಗಳನ್ನು ಹಂಚಿಕೊಂಡು ನವದಂಪತಿಗೆ ಶುಭಹಾರೈಸಿದ್ದಾರೆ.
‘ಶೋಭಿತಾ ಮತ್ತು ಚೈ ಅವರು ಹೊಸ ಅಧ್ಯಾಯ ಆರಂಭಿಸುತ್ತಿರುವುದು ನನ್ನ ಪಾಲಿಗೆ ವಿಶೇಷ ಮತ್ತು ಭಾವನಾತ್ಮಕ ಸಂದರ್ಭವಾಗಿದೆ. ಇಬ್ಬರಿಗೂ ಅಭಿನಂದನೆಗಳು. ಶೋಭಿತಾಗೆ ನಮ್ಮ ಕುಟುಂಬಕ್ಕೆ ಆತ್ಮೀಯ ಸ್ವಾಗತ. ಈಗಾಗಲೇ ನಮ್ಮ ಜೀವನದಲ್ಲಿ ಸಾಕಷ್ಟು ಖುಷಿಯನ್ನು ತುಂಬಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.
ನಾಗಚೈತನ್ಯ ಮತ್ತು ಶೋಭಿತಾ 2022ರಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಊಹಾಪೋಹಗಳ ನಡುವೆ, ಕಳೆದ ಆಗಸ್ಟ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.