ADVERTISEMENT

ಅನುಷಾ ಶೆಟ್ಟಿಯನ್ನು ವರಿಸಿದ ತೆಲುಗು ನಟ ನಾಗ ಶೌರ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 9:30 IST
Last Updated 21 ನವೆಂಬರ್ 2022, 9:30 IST
ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ
ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ   

ಬೆಂಗಳೂರು: ತೆಲುಗು ಯುವ ನಟ ನಾಗ ಶೌರ್ಯ ಅವರು ಬೆಂಗಳೂರು ಮೂಲದ ಅನುಷಾ ಶೆಟ್ಟಿ ಅವರನ್ನು ವರಿಸಿದ್ದಾರೆ.

ಭಾನುವಾರ ಬೆಂಗಳೂರಿನಲ್ಲಿ ಅದ್ಧೂರಿ ವಿವಾಹ ನಡೆದಿದೆ. 19 ರಂದು ನಿಶ್ಚಿತಾರ್ಥ ನೆರವೇರಿದೆ.

ಇಂಟಿರಿಯರ್ ಫ್ಯಾಶನ್ ಡಿಸೈನರ್ ಆಗಿರುವ ಅನುಷಾ ಅವರು ಉದ್ಯಮಿ ಕೂಡ ಆಗಿದ್ದಾರೆ. ನಾಗಶೌರ್ಯ ಹಾಗೂ ಅನುಷಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು.

ADVERTISEMENT

ಎರಡೂ ಕುಟುಂಬಗಳ ಸಮಕ್ಷಮದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹ ನಡೆದಿದೆ. ದಾಂಪತ್ಯಕ್ಕೆ ಕಾಲಿರಿಸಿರುವ ನಾಗೌಶೌರ್ಯ ದಂಪತಿಗೆ ಚಿತ್ರರಂಗದ ಅನೇಕರು ಶುಭ ಕೋರಿದ್ದಾರೆ.

ತೆಲುಗಿನಲ್ಲಿ 'ಓ ಬೇಬಿ'ಸೇರಿದಂತೆ 24 ಸಿನಿಮಾಗಳಲ್ಲಿ ನಾಗಶೌರ್ಯ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.