ADVERTISEMENT

‘ವಿದ್ಯಾಪತಿ’ಯಾಗಿ ತೆರೆಗೆ ಬರಲು ಸಜ್ಜಾದ ನಟ ನಾಗಭೂಷಣ್‌

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 22:42 IST
Last Updated 19 ಆಗಸ್ಟ್ 2024, 22:42 IST
   

‘ಟಗರು ಪಲ್ಯ’ ಬೆನ್ನಲ್ಲೇ ನಟ ನಾಗಭೂಷಣ್‌ ‘ವಿದ್ಯಾಪತಿ’ಯಾಗಿ ತೆರೆಗೆ ಬರಲು ಸಜ್ಜಾಗುತ್ತಿದ್ದಾರೆ. ಇದು ನಟ ಧನಂಜಯ ಅವರ ಡಾಲಿ ಪಿಕ್ಚರ್ಸ್‌ನ 4ನೇ ಸಿನಿಮಾವಾಗಿದ್ದು, ಇತ್ತೀಚೆಗೆ ನಾಗಭೂಷಣ್‌ ಜನ್ಮದಿನದ ಪ್ರಯುಕ್ತ ವಿದ್ಯಾಪತಿಯ ಪ್ರೊಮೊ ರಿಲೀಸ್‌ ಮಾಡಿದೆ ಚಿತ್ರತಂಡ.

‘ಜೇಬು ತುಂಬ ಕಾಸಿರೋನು ಕೋಟ್ಯಾಧಿಪತಿ.. ನಿಮ್ಮನ್ನೆಲ್ಲ ಹೊಟ್ಟೆತುಂಬ ನಗಿಸುವವನೇ ನಮ್ಮ ‘ವಿದ್ಯಾಪತಿ’’ ಎಂದು ಚಿತ್ರದ ನಾಯಕನನ್ನು ಚಿತ್ರತಂಡ ಪರಿಚಯಿಸಿದೆ. ಕರಾಟೆ ಕಿಂಗ್ ವೇಷ ತೊಟ್ಟಿರುವ ನಾಗಭೂಷಣ್ ಮಾಡುವ ಎಡವಟ್ಟಿನ ತುಣುಕು ಪ್ರೊಮೊದಲ್ಲಿದೆ. ‘ಇಕ್ಕಟ್‌’ ಸಿನಿಮಾ ನಿರ್ದೇಶಿಸಿದ್ದ ಇಶಾಂ ಖಾನ್‌ ಹಾಗೂ ಹಸೀಂ ಖಾನ್‌ ಅವರೇ ‘ವಿದ್ಯಾಪತಿ’ಯ ಸಾರಥಿಗಳಾಗಿದ್ದಾರೆ. ಲವಿತ್ ಛಾಯಾಚಿತ್ರಗ್ರಹಣ, ಡಾಸ್ ಮೋಡ್ ಸಂಗೀತ ನಿರ್ದೇಶನ, ಮುರುಳಿ ನೃತ್ಯ ನಿರ್ದೇಶನ, ಸುಜಿತ್ ವೆಂಕಟರಾಮಯ್ಯ ಸಾಹಿತ್ಯ, ಅರ್ಜುನ್ ಮಾಸ್ಟರ್ ಆ್ಯಕ್ಷನ್ ‘ವಿದ್ಯಾಪತಿ’ಗಿದೆ. ನಾಗಭೂಷಣ್‌ಗೆ ನಾಯಕಿಯಾಗಿ ‘ಉಪಾಧ್ಯಕ್ಷ’ ಸಿನಿಮಾ ಖ್ಯಾತಿಯ ಮಲೈಕಾ ವಸುಪಾಲ್ ನಟಿಸಿದ್ದಾರೆ. ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT