ADVERTISEMENT

ನಟ ಆರ್‌. ಮಾಧವನ್‌ಗೆ ಕೋವಿಡ್ ಪಾಸಿಟಿವ್‌

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 11:38 IST
Last Updated 25 ಮಾರ್ಚ್ 2021, 11:38 IST
ಆರ್‌. ಮಾಧವನ್‌
ಆರ್‌. ಮಾಧವನ್‌   

ಖ್ಯಾತ ನಟ ಆರ್‌. ಮಾಧವನ್‌ಗೆ ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಈ ನಟ. ಅಲ್ಲದೇ ಇದೇ ಸಂದರ್ಭ 3 ಈಡಿಯಟ್ಸ್‌ ಸಿನಿಮಾದ ಬಗ್ಗೆ ಕೂಡ ಪ್ರಸ್ತಾಪಿಸಿದ್ದಾರೆ.

ನಿನ್ನೆ ಅಷ್ಟೇ ನಟ ಅಮೀರ್‌ ಖಾನ್‌ಗೆ ಕೋವಿಡ್‌ ಪಾಸಿಟಿವ್ ದೃಢಪಟ್ಟಿತ್ತು. ಈ ಇಬ್ಬರು ನಟರು 3 ಈಡಿಯಟ್ಸ್ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ರಾಜ್‌ಕುಮಾರ್ ಹಿರಾನಿ ಅವರ 3 ಈಡಿಯಟ್ಸ್ ಸಿನಿಮಾವನ್ನು ಪ್ರಸ್ತಾಪಿಸಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಮಾಧವನ್‌ ‘ಫರ್ಹಾನ್‌ ರಾಂಚೊವನ್ನು ಹಿಂಬಾಲಿಸುತ್ತಿದ್ದಾನೆ. ಎಲ್ಲರ ಪ್ರೀತಿಗೆ ಧನ್ಯವಾದ, ನಾನು ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾದ ‘ಮಾರಾ’ ಚಿತ್ರದಲ್ಲಿ ಮಾಧವನ್ ಕೊನೆಯ ಬಾರಿ ತೆರೆ ಮೇಲೆ ಕಾಣಿಸಿಕೊಂಡಿದ್ದರು.

ADVERTISEMENT

ಇತ್ತೀಚೆಗೆ ನಟರಾದ ಕಾರ್ತಿಕ್ ಆರ್ಯನ್‌, ರಣಬೀರ್ ಕಪೂರ್‌, ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ, ರೋಹಿತ್ ಸರಫ್ ಸೇರಿದಂತೆ ಹಲವರಿಗೆ ಕೋವಿಡ್‌ ಪಾಸಿಟಿವ್ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.