ADVERTISEMENT

ರವಿ ಶ್ರೀವತ್ಸ ಮೇಲೆ #MeToo ಆರೋಪ: ಬಹಿರಂಗ ಕ್ಷಮೆ ಕೋರಿದ ನಟಿ ಸಂಜನಾ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2018, 12:06 IST
Last Updated 13 ನವೆಂಬರ್ 2018, 12:06 IST
   

ಬೆಂಗಳೂರು: ನಿರ್ದೇಶಕ ರವಿ ಶ್ರೀವತ್ಸಮೇಲೆ ಮಿ ಟೂ ಆರೋಪ ಮಾಡಿದ್ದ ನಟಿ ಸಂಜನಾ ಮಂಗಳವಾರಬಹಿರಂಗ ಕ್ಷಮೆ ಕೋರಿದ್ದಾರೆ.

ನಿರ್ದೇಶಕರ ಸಂಘದ ಮುಂದೆ ಸಂಜನಾ ಗುಲ್ರಾನಿ ರವಿ ಶ್ರೀವತ್ಸ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

'ಸಿನಿಮಾದ ಚಿತ್ರೀಕರಣ ಸಂದರ್ಭದಲ್ಲಿ ತಮಗಾದ ನೋವನ್ನು ಹೇಳಿಕೊಂಡಿದ್ದೇ, ಅದು ನನ್ನ ಅಭಿಪ್ರಾಯ ಮಾತ್ರವಾಗಿತ್ತು ನಾನು ಯಾರ ಮನಸ್ಸನ್ನು ನೋಯಿಸುವ ಸಲುವಾಗಿ ಈ ಅರೋಪ ಮಾಡಿಲ್ಲ ಎಂದು ಸಂಜನಾ ಹೇಳಿದ್ದಾರೆ.

ADVERTISEMENT

ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಸಮ್ಮುಖದಲ್ಲಿ, ನಿರ್ದೇಶಕರ ಸಂಘದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಿರ್ದೇಶಕ ಸಂಘದವರ ಮನ ನೋಯಿಸಿದ್ದಕ್ಕೆ ಕ್ಷಮೆ ಕೇಳುತ್ತಾ ಇದ್ದೇನೆ ಎನ್ನುತ್ತ ಸಂಜನಾ ಕ್ಷಮೆ ಕೋರಿದರು

ಒಂದು ಮುತ್ತಿನ ಕಥೆ ಹೇಳಿ ಮೂವತ್ತೈದು ಮುತ್ತುಗಳ ಚಿತ್ರೀಕರಣ ನಡೆಸಿದರು, ಒತ್ತಾಯದಿಂದ ಕೆಟ್ಟ ಅಶ್ಲೀಲ ದೃಶ್ಯಗಳಲ್ಲಿ ನಟಿಸುವಂತೆ ಮಾಡಿದರೆಂದು ನಟಿ ಸಂಜನಾ, ನಿರ್ದೇಶಕ ರವಿಶ್ರೀವತ್ಸ ಅವರ ಮೇಲೆ ಮೀಟೂ ಆರೋಪ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.