ADVERTISEMENT

ಪತ್ರಕರ್ತೆಗೆ ನಿಂದನೆ: ಮಲಯಾಳ ಚಿತ್ರನಟ ಶ್ರೀನಾಥ್‌ ಭಾಸಿ ಬಂಧನ

ಪಿಟಿಐ
Published 26 ಸೆಪ್ಟೆಂಬರ್ 2022, 14:06 IST
Last Updated 26 ಸೆಪ್ಟೆಂಬರ್ 2022, 14:06 IST
ಶ್ರೀನಾಥ್‌ ಭಾಸಿ/ಇನ್‌ಸ್ಟಾಗ್ರಾಂ ಚಿತ್ರ
ಶ್ರೀನಾಥ್‌ ಭಾಸಿ/ಇನ್‌ಸ್ಟಾಗ್ರಾಂ ಚಿತ್ರ   

ಕೊಚ್ಚಿ(ಕೇರಳ): ಸಂದರ್ಶನದ ವೇಳೆ ಪತ್ರಕರ್ತೆಗೆ ನಿಂದಿಸಿದ ಆರೋಪದಲ್ಲಿ ಮಲಯಾಳ ಚಿತ್ರನಟ ಶ್ರೀನಾಥ್‌ ಭಾಸಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶ್ರೀನಾಥ್‌ ವಿರುದ್ಧ ಆನ್‌ಲೈನ್‌ ಮಾಧ್ಯಮವೊಂದರ ಪತ್ರಕರ್ತೆ ಮಾರಾಡು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

‘ಚಟ್ಟಂಬಿ’ ಸಿನಿಮಾದ ಪ್ರಚಾರದ ಅಂಗವಾಗಿ ಸೆಪ್ಟೆಂಬರ್ 21ರಂದು ಹಮ್ಮಿಕೊಂಡಿದ್ದ ಸಂದರ್ಶನದ ವೇಳೆ ಶ್ರೀನಾಥ್‌ ಅವರು ಪತ್ರಕರ್ತೆಯ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದರು. ಈ ದೃಶ್ಯವಿದ್ದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.