ADVERTISEMENT

ಉದ್ಯಮಿ ಯಶಸ್‌ ಪಟ್ಲಾ ಜತೆ  ಸಪ್ತಪದಿ ತುಳಿದ ನಟಿ ಅದಿತಿ ಪ್ರಭುದೇವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ನವೆಂಬರ್ 2022, 10:21 IST
Last Updated 28 ನವೆಂಬರ್ 2022, 10:21 IST
ಯಶಸ್‌ ಪಟ್ಲಾ, ನಟಿ ಅದಿತಿ ಪ್ರಭುದೇವ
ಯಶಸ್‌ ಪಟ್ಲಾ, ನಟಿ ಅದಿತಿ ಪ್ರಭುದೇವ   

ಬೆಂಗಳೂರು: ಚಂದನವನದ ನಟಿನಟಿ ಅದಿತಿ ಪ್ರಭುದೇವ ಅವರು ಉದ್ಯಮಿಯಶಸ್‌ ಪಟ್ಲಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಅರಮನೆ ಮೈದಾನದಲ್ಲಿ ಸೋಮವಾರ ಅದಿತಿ ಹಾಗೂ ಯಶಸ್‌ ಹಲವು ಸೆಲೆಬ್ರಿಟಿಗಳು, ಕುಟುಂಬದವರು, ಗೆಳೆಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು.ಬೆಳಗ್ಗೆ 9.30ರಿಂದ 10.32ರ ಮುಹೂರ್ತದಲ್ಲಿ ಅದಿತಿ ಮದುವೆ ಆಗಿದ್ದಾರೆ.

ಅದಿತಿ ಪ್ರಭುದೇವ ಅವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

ADVERTISEMENT

ನಿನ್ನೆ (ಭಾನುವಾರ)ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆಯಶ್, ರಾಧಿಕಾ ಪಂಡಿತ್, ಶ್ರೀನಗರ ಕಿಟ್ಟಿ, ಮೇಘಾ ಶೆಟ್ಟಿ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರುಆರತಕ್ಷತೆಗೆ ಆಗಮಿಸಿ ನವದಂಪತಿಗೆ ಶುಭಾಶಯ ಕೋರಿದರು.

ಆರತಕ್ಷತೆ ಹಾಗೂ ಮದುವೆಯ ವಿಡಿಯೊ, ಫೋಟೊಗಳನ್ನು ಅದಿತಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ, ವಿಡಿಯೊಗಳನ್ನು ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಅದಿತಿಯ ಮದುವೆ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಅದಿತಿ ಪ್ರಭುದೇವ ನಟನೆಯ ‘ತ್ರಿಬಲ್ ರೈಡಿಂಗ್’ ಸಿನಿಮಾ ಬಿಡುಗಡೆಯಾಗಿದ್ದು ಚಂದನವನದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.