ADVERTISEMENT

ಹಾಕಿ ಆಟಗಾರ್ತಿಯಾಗಿ ಅನಘಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 17:13 IST
Last Updated 27 ಮಾರ್ಚ್ 2019, 17:13 IST
ಅನಘಾ
ಅನಘಾ   

ಮಲಯಾಳಂ ಜನಪ್ರಿಯ ನಟಿ ಅನಘಾ ‘ನಟ್ಫಿ ತುಣೈ’ ಎನ್ನುವ ತಮಿಳು ಸಿನಿಮಾದ ಮುಖ್ಯಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಹಾಕಿ ಆಟಗಾರ್ತಿಯಾಗಿ ಅನಘಾ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಹಾಕಿ ಆಟಗಾರ್ತಿಯ ಪಾತ್ರಕ್ಕೆ ಜೀವ ತುಂಬಲು ಅನಘಾ ಒಂದು ತಿಂಗಳು ಕಾಲ ಹಾಕಿ ತರಬೇತಿಯನ್ನೂ ಪಡೆದಿದ್ದಾರಂತೆ.

‘ಸಿನಿಮಾ ಚಿತ್ರೀಕರಣ ಆರಂಭವಾಗುವುದಕ್ಕೂ ಎರಡು ತಿಂಗಳು ಮುಂಚೆಯೇ ನಾನು ಚೈನ್ನೈನಲ್ಲಿ ಹಾಕಿ ಕ್ರೀಡೆಗೆ ಸಂಬಂಧಿಸಿದ ಕಾರ್ಯಾಗಾರದಲ್ಲಿ ತೊಡಗಿಕೊಂಡಿದ್ದೆ. ‘ನಟ್ಪಿ ತುಣೈ’ ಸಿನಿಮಾದಲ್ಲಿ ನಾನು ಹಾಕಿ ಆಟಗಾರ್ತಿಯಾಗಿ ಕಾಣಿಸಿ ಕೊಳ್ಳಲಿರುವುದರಿಂದ ಪ್ರತಿನಿತ್ಯವೂ ಕನಿಷ್ಠ ಎರಡು ತಾಸುಗಳ ಕಾಲ ಹಾಕಿ ಅಭ್ಯಾಸ ಮಾಡುತ್ತಿದ್ದೆ.

ಹಾಕಿಗೆ ಸಂಬಂಧಿಸಿದಂತೆ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳಲ್ಲೂ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ನನ್ನ ಭಾಗದ ಚಿತ್ರೀಕರಣವನ್ನು ನಾನಿನ್ನೂ ವೀಕ್ಷಿಸಿಲ್ಲ. ಆದರೆ, ಶಾಲೆಯಲ್ಲಿ ನಾನು ಕ್ರೀಡಾಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೆ’ ಎಂದು ಅನಘಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ADVERTISEMENT

ಮಲಯಾಳಂ ಸಿನಿರಂಗದಲ್ಲಿ ಜನಪ್ರಿಯವಾಗಿರುವ ಅನಘಾ ಇದೇ ಮೊದಲ ಬಾರಿಗೆ ತಮಿಳು ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತೀಯ ಸಿನಿರಂಗದ ಮೇಲೆ ಕಣ್ಣಿಟ್ಟಿರುವ ಅನಘಾ ಮುಂದಿನ ದಿನಗಳಲ್ಲಿ ಕಾರ್ತಿಕೇಯ ಜತೆ ತೆಲುಗು ಸಿನಿಮಾದಲ್ಲೂ ಅಭಿನಯಿಸಲಿದ್ದಾರೆ.

ನಟನಾ ಮೋಹಕ್ಕಾಗಿ ತಮ್ಮ ಎಂಜಿನಿಯರ್ ವೃತ್ತಿಯನ್ನೇ ಬಿಟ್ಟು ಬಂದಿರುವ ಅನಘಾ, ಚಿತ್ರರಂಗದಲ್ಲಿ ಗಂಭೀರವಾಗಿ ತೊಡಗಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ನಟಿ. ಕಲಾವಿದರು ಯಾವತ್ತೂ ಒಂದೇ ಭಾಷೆಗೆ ಅಂಟಿಕೊಂಡಿರಬಾರದು ಎನ್ನುವ ಅನಘಾ, ತಮಿಳು ಸಿನಿಮಾದಲ್ಲಿ ಮೊದಲ ಬಾರಿಗೆ ಅಭಿನಯಿಸುವಾಗ ಎದುರಾಗಿದ್ದ ಭಾಷಾ ತೊಡಕಿನ ಬಗ್ಗೆಯೂ ಅಳುಕಿಲ್ಲದೇ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.