ADVERTISEMENT

ತೆಲುಗು ನಟಿ ಗಾಯತ್ರಿ ರಸ್ತೆ ಅಪಘಾತದಲ್ಲಿ ನಿಧನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2022, 10:29 IST
Last Updated 20 ಮಾರ್ಚ್ 2022, 10:29 IST
ಗಾಯತ್ರಿ
ಗಾಯತ್ರಿ   

ತೆಲುಗಿನ ಜನಪ್ರಿಯ ಯುಟ್ಯೂಬರ್‌ ಹಾಗೂ ನಟಿ ಗಾಯತ್ರಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಶನಿವಾರ ಸಂಜೆ ಈ ಅವಘಡ ಜರುಗಿದೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಕಾರಿನಲ್ಲಿ ಗೆಳೆಯ ರೋಹಿತ್‌ ಜೊತೆ ಗಾಯತ್ರಿ ತಮ್ಮ ನಿವಾಸಕ್ಕೆ ಮರಳುತ್ತಿರುವಾಗ ಹೈದರಾಬಾದಿನ ಗಛ್ಛಿಭೌಲಿ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಗಾಯತ್ರಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರೋಹಿತ್‌ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿದ್ದ ಗಾಯತ್ರಿ ಹಲವಾರು ಸಿನಿಮಾ ಹಾಗೂ ವೆಬ್‌ ಸೀರೀಸ್‌ಗಳಲ್ಲಿ ನಟಿಸಿದ್ದರು.

ಗಾಯತ್ರಿ ನಿಧನಕ್ಕೆ ಟಾಲಿವುಡ್‌ ನಟ ನಟಿಯರು ಸೇರಿದಂತೆ ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.