ADVERTISEMENT

ರಾವಣ ಪ್ರತಿಕೃತಿ ದಹನ ಮಾಡಲಿರುವ ನಟಿ ಕಂಗನಾ ರನೌತ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಅಕ್ಟೋಬರ್ 2023, 7:39 IST
Last Updated 24 ಅಕ್ಟೋಬರ್ 2023, 7:39 IST
   

ನವದೆಹಲಿ: ಈ ಬಾರಿ ವಿಜಯದಶಮಿ ಹಬ್ಬವನ್ನು ವಿಭಿನ್ನವಾಗಿ ಆಚರಿಸಲು ದೆಹಲಿಯ ಲವಕುಶ ರಾಮಲೀಲಾ ಸಮಿತಿಯು ನಿರ್ಧರಿಸಿದ್ದು, ಬಾಲಿವುಡ್ ನಟಿ ಕಂಗನಾ ರನೌತ್‌ ರಾವಣ ಪ್ರತಿಕೃತಿ ದಹನ ಮಾಡಲಿದ್ದಾರೆ.

ಆ ಮೂಲಕ 50 ವರ್ಷದಲ್ಲಿ ಕೆಂಪುಕೋಟೆಯಲ್ಲಿ ರಾವಣನ ಪ್ರತಿಕೃತಿ ದಹನ ಮಾಡಿದ ದೇಶದ ಮೊದಲ ಮಹಿಳೆಯಾಗಿ ಹೊರಹೊಮ್ಮಲಿದ್ದಾರೆ.

‘ದೆಹಲಿಯ ಕೆಂಪು ಕೋಟೆಯಲ್ಲಿ 50 ವರ್ಷದಿಂದ ರಾವಣ ಪ್ರತಿಕೃತಿ ದಹನ ಕಾರ್ಯಕ್ರಮ ನಡೆಯುತ್ತಿದ್ದು, ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳು ಬಾಣ ಬಿಡುವ ಮೂಲಕ ಪ್ರತಿಕೃತಿ ದಹನ ಮಾಡಲಿದ್ದಾರೆ’ ಎಂದು ಲವಕುಶ ರಾಮಲೀಲಾ ಸಮಿತಿಯ ಅಧ್ಯಕ್ಷ ಅರ್ಜುನ್ ಸಿಂಗ್ ಹೇಳಿದ್ದಾರೆ.

ADVERTISEMENT

‘ಈ ಕಾರ್ಯಕ್ರಮವನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡಲು ಹಲವು ಗಣ್ಯರನ್ನು ಕರೆಯಿಸಿ ರಾವಣ ದಹನ ಮಾಡುತ್ತೇವೆ. ಪ್ರಧಾನಿ ಮೋದಿ, ರಾಮನಾಥ್‌ ಕೋವಿಂದ್ ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯವನ್ನು ನಡೆಸಿಕೊಟ್ಟಿದ್ದಾರೆ. ಕಳೆದ ವರ್ಷ ಟಾಲಿವುಡ್ ನಟ ಪ್ರಭಾಸ್‌ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರವಾಗಿದ್ದು, ಇದರ ಭಾಗವಾಗಿ ಈ ಬಾರಿ ಮಹಿಳೆಗೆ ಅವಕಾಶ ನೀಡಲಾಗಿದೆ’ ಎಂದರು.

ರಾಮಣ ದಹನ ಕಾರ್ಯಕ್ರಮದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿರುವ ಕಂಗನಾ, ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.