ಸ್ಯಾಂಡಲ್‌ವುಡ್ ನಟಿ ಕಾರುಣ್ಯರಾಮ್ ಕೂದಲು ದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
‘ಹೆಣ್ಣುಮಕ್ಕಳು ತಲೆಕೂದಲು ಬೆಳೆಸಲು ಎಷ್ಟೊಂದು ಕಷ್ಟ ಪಡುತ್ತಾರೆ ಅನ್ನುವುದು ಎಲ್ಲರಿಗೂ ತಿಳಿದಿದೆ. ನಾನು ಸಹ ಇದಕ್ಕೆ ಹೊರತಲ್ಲ. ಆದರೆ ಇದೇ ಕೂದಲು ಕ್ಯಾನ್ಸರ್ ಪೀಡಿತರಿಗೆ ಅತ್ಯಾವಶ್ಯಕ ಎಂಬುದು ತಿಳಿದು ಕೂದಲು ದಾನ ಮಾಡಲು ನಿರ್ಧರಿಸಿದ್ದೇನೆ. ಇದರಿಂದ ಖುಷಿ ಇದೆ’ ಎಂದಿದ್ದಾರೆ ಕಾರುಣ್ಯ.
‘ವಜ್ರಕಾಯ’ ಸಿನಿಮಾದ ಮೂಲಕ ಖ್ಯಾತಿ ಗಳಿಸಿರುವ ಈ ನಟಿ ‘ಮತ್ತೊಂದು ಮದುವೆನಾ, ನರಸಿಂಹ, ಎರಡು ಕನಸು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಮನೆ ಮಾರಾಟಕ್ಕಿದೆ, ಕಿರಗೂರಿನ ಗಯ್ಯಾಳಿಗಳು’ ಚಿತ್ರಗಳು ಸೇರಿದಂತೆ ಕನ್ನಡ, ತಮಿಳು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿನಾಸಂ ಸತೀಶ್ ನಟನೆಯ ಮುಂದಿನ ‘ಪೆಟ್ರೊಮ್ಯಾಕ್ಸ್’ ಸಿನಿಮಾದಲ್ಲೂ ಕಾರುಣ್ಯ ಬಣ್ಣ ಹಚ್ಚಿದ್ದಾರೆ. ಕನ್ನಡ ಬಿಗ್‌ಬಾಸ್‌ನ ಆವೃತ್ತಿಯಲ್ಲೂ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.