ADVERTISEMENT

ಸೌತ್ ಸಿನಿ ಸ್ಟಾರ್ ನಟಿ ಕೀರ್ತಿ ಸುರೇಶ್‌ ಜನ್ಮದಿನದ ಪ್ರಯುಕ್ತ ಪೋಸ್ಟರ್ ಬಿಡುಗಡೆ

ಪೋಸ್ಟರ್ ಬಿಡುಗಡೆ ಮಾಡಿದ 'ಸರ್ಕಾರು ವಾರಿ ಪಾಟಾ' ಚಿತ್ರತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2021, 11:29 IST
Last Updated 17 ಅಕ್ಟೋಬರ್ 2021, 11:29 IST
ಕೀರ್ತಿ ಸುರೇಶ್
ಕೀರ್ತಿ ಸುರೇಶ್   

ಬೆಂಗಳೂರು: ತೆಲುಗು ಹಾಗೂ ತಮಿಳು ಸಿನಿಮಾ ರಂಗದ ಬಹು ಬೇಡಿಕೆ ನಟಿ ಕೀರ್ತಿ ಸುರೇಶ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅವರ 29 ನೇ ವರ್ಷದ ಹುಟ್ಟುಹಬ್ಬಕ್ಕೆ ಸಿನಿರಂಗದ ಗಣ್ಯರು, ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

ಕೀರ್ತಿ ಹಾಗೂ ನಟ ಪ್ರಿನ್ಸ್ಮಹೇಶ್ ಬಾಬು ಅಭಿನಯದ ಬಹುನಿರೀಕ್ಷಿತ ಚಿತ್ರ ‘ಸರ್ಕಾರು ವಾರಿ ಪಾಟಾ'ಸಿನಿಮಾ ಮುಂದಿನ ವರ್ಷ ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರ ತಂಡ ಕೀರ್ತಿ ಅವರಿಗೆ ವಿಶೇಷ ಶುಭಾಶಯ ಕೋರಿ ಇಂದು ಪೋಸ್ಟರ್ ಬಿಡುಗಡೆ ಮಾಡಿದೆ.

1992 ಅಕ್ಟೋಬರ್ 17 ರಂದು ಚೆನ್ನೈನಲ್ಲಿ ಜನಿಸಿರುವ ಕೀರ್ತಿ ಸುರೇಶ್ ತಮಿಳು ಹಿರಿಯ ನಟಿ ಮೇನಕಾ ಅವರ ಮಗಳು. ಸಿನಿಮಾ ಕುಟುಂಬದಿಂದ ಬಂದ ಕೀರ್ತಿ 2000 ರಿಂದ 2003 ರವರೆಗೆ ಬಾಲನಟಿಯಾಗಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು.

ADVERTISEMENT

2013 ರಲ್ಲಿ ಮಲೆಯಾಳಂನ ‘ಗೀತಾಂಜಲಿ’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ‘ನೆನು ಶೈಲಜಾ’, ‘ರೆಮೊ’, ‘ಭೈರವ’, ‘ಸರ್ಕಾರ್’, ‘ಮಹಾನಟಿ’, ‘ಜಾತಿ ರತ್ನಾಲು’ ಸೇರಿದಂತೆ 27 ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಮಲೆಯಾಳಂನಲ್ಲಿ ‘ಮರಕ್ಕರ್’ ಹಾಗೂ ರಜನಿಕಾಂತ್ ಜೊತೆ ‘ಅಣ್ಣಾತ್ತೆ’ ಸೇರಿದಂತೆ ಕೀರ್ತಿ ಸುರೇಶ್ ಅವರ 8 ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ಅಣ್ಣಾತ್ತೆ ನವೆಂಬರ್ 4ಕ್ಕೆ ಬಿಡುಗಡೆಯಾಗಲಿದೆ. ಇನ್ನು ‘ಸರ್ಕಾರು ವಾರಿ ಪಾಟಾ’ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಿಸುತ್ತಿದ್ದು, ಪರಶುರಾಮ್ ನಿರ್ದೇಶನ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.