ಮಧುಬಾಲಾ
ರಾತ್ರಿ ಅಪರಾತ್ರಿಗಳಲ್ಲಿ ಆ ಬಂಗಲೆಯ ಕತ್ತಲೆ ಕೋಣೆಯೊಳಗೆ ಪ್ರತಿ ಮೂಲೆಯಲ್ಲಿಯೂ ಹೋಗಿ ಕಾದಿದ್ದೇನೆ. ಯಾವತ್ತಾದರೂ ಮಧುಬಾಲಾಳ ಆತ್ಮ ಬಂದೀತೆ ಎಂಬ ನಿರೀಕ್ಷೆಯಲ್ಲಿ ಅಮಾವಾಸ್ಯೆಯ ಕತ್ತಲೆಯಲ್ಲಿಯೂ ಹೋಗಿ ಕಾದಿರುವೆ. ಹೀಗೆಂದು ಬಾಲಿವುಡ್ ಸಿನಿಮಾ ನಿರ್ದೇಶಕ ಇಮ್ತಿಯಾಝ್ ಅಲಿ ಹೇಳಿದ್ದಾರೆ.
ಡಿಜಿಟಲ್ ವೇದಿಕೆಯಲ್ಲಿ ಮಾತನಾಡುತ್ತ, ಒಂದು ಹಾರರ್ ಮೂವಿ ಮಾಡುವ ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ಮಧುಮತಿ ತಮ್ಮಿಷ್ಟದ ಹಾರರ್ ಮೂವಿ ಎಂದಿರುವ ಅವರು, ಈ ಕಾರಣಕ್ಕಾಗಿಯೇ ಮಧುಬಾಲಾಳ ಬಂಗಲೆಯಲ್ಲಿ ಈ ಹಿಂದೆ ಹಲವು ರಾತ್ರಿಗಳನ್ನು ಕಳೆದಿದ್ದೆ ಎಂದೂ ತಿಳಿಸಿದ್ದಾರೆ.
ಇಮ್ತಿಯಾಝ್ ಅಲಿ
ಜಬ್ ವಿ ಮೆಟ್, ತಮಾಶಾಗಳಂಥ ಚಿತ್ರಗಳನ್ನು ನೀಡಿದ ಇಮ್ತಿಯಾಝ್ ಅಲಿ ಅವರಿಗೆ ಒಮ್ಮೆಯಾದರೂ ಮಧುಬಾಲಾಳ ಆತ್ಮದೊಂದಿಗೆ ಭೇಟಿಯಾಗಬಹುದು ಎಂದು ಬಯಸಿದ್ದರಂತೆ. ಮುಂಬೈನ ಬಾಲಿವುಡ್ ಅಂಗಳದಲ್ಲಿ ಯಾರೂನೂ ಮಧುಬಾಲಾ ಬಂಗ್ಲೆಯಲ್ಲಿ ರಾತ್ರಿ ಹೊತ್ತು ಶೂಟಿಂಗ್ ಮಾಡುತ್ತಿರಲಿಲ್ಲ. ಅಲ್ಲಿ ಅವಳ ಆತ್ಮವಿದೆ ಎಂದೇ ನಂಬಿದ್ದರಂತೆ. ‘ಭಟಕ್‌ತಿ ಆತ್ಮಾ’ ಅವರಿಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹಲವಾರು ರಾತ್ರಿಗಳನ್ನು ಆ ಬಂಗಲೆಯಲ್ಲಿ ಕಳೆದಿದ್ದೆ. ತಣ್ಣನೆಯ ಸುಳಿಗಾಳಿ ಬಿಟ್ಟರೆ ಯಾವ ಆತ್ಮವೂ ಸುಳಿಯಲಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.