ಪ್ರಿಯಾ ಮರಾಠೆ
ಮುಂಬೈ: ಹಿಂದಿಯ ಹಲವು ಜನಪ್ರಿಯ ಧಾರವಾಹಿಗಳಲ್ಲಿ ಅಭಿನಯಿಸಿರುವ ನಟಿ ಪ್ರಿಯಾ ಮರಾಠೆ ಭಾನುವಾರ ಮುಂಬೈನಲ್ಲಿ ನಿಧನರಾದರು. 38 ವರ್ಷ ವಯಸ್ಸಿನ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
‘ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾನುವಾರ ಬೆಳಿಗ್ಗೆ ನಿಧನ ಹೊಂದಿದ್ದಾರೆ’ ಎಂದು ಮಹಾರಾಷ್ಟ್ರ ಟೈಮ್ಸ್ ವರದಿ ಮಾಡಿದೆ.
1987 ಏಪ್ರಿಲ್ 23ರಂದು ಮುಂಬೈನಲ್ಲಿ ಜನಿಸಿದ ಪ್ರಿಯಾ ಅವರು ಮರಾಠಿ ಧಾರವಾಹಿ ‘ಯಾ ಸುಖನೋಯ’ ಮೂಲಕ ನಟನ ಜೀವನಕ್ಕೆ ಕಾಲಿಟ್ಟಿದ್ದರು. ಜೀ ವಾಹಿನಿಯಲ್ಲಿ ಪ್ರಸಾರವಾದ ‘ಪವಿತ್ರಾ ರಿಶ್ತಾ’ ಧಾರವಾಹಿಯಲ್ಲಿ ‘ವರ್ಷಾ ಸತೀಶ್’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರವು ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು.
ನಂತರ ‘ಬಡೇ ಅಚ್ಚೆ ಲಗ್ತೆ ಹೈ’, ‘ತೂ ತಿಥೆ ಮೆ’, ‘ಭಾಗೇ ರೇ ಮಾನ್’, ‘ಜಯಸ್ತುತೆ’ ಮತ್ತು ‘ಭಾರತ್ ಕಾ ವೀರ್ ಪುತ್ರ ಮಹಾರಾಣಾ ಪ್ರತಾಪ್’ ಮುಂತಾದ ಧಾರವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.