ADVERTISEMENT

ಹೆಲ್ತ್‌ ಪಾಡ್‌ಕಾಸ್ಟ್‌ ಆರಂಭಿಸಿದ ಸಮಂತಾ: ಮೊದಲ ಎಪಿಸೋಡ್‌ನಲ್ಲಿ ಹೇಳಿದ್ದಿಷ್ಟು..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2024, 4:22 IST
Last Updated 20 ಫೆಬ್ರುವರಿ 2024, 4:22 IST
<div class="paragraphs"><p> ಸಮಂತಾ ರುತ್‌ ಪ್ರಭು </p></div>

ಸಮಂತಾ ರುತ್‌ ಪ್ರಭು

   

ಚಿತ್ರಕೃಪೆ: ಇನ್‌ಸ್ಟಾಗ್ರಾಮ್‌ 

ಚೆನ್ನೈ: ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡ ಟಾಲಿವುಡ್‌ ನಟಿ ಸಮಂತಾ ರುತ್‌ ಪ್ರಭು ಇತ್ತೀಚೆಗೆ ಹೆಲ್ತ್‌ ಪಾಡ್‌ಕಾಸ್ಟ್‌ ಮೂಲಕ ಕೆಲಸಕ್ಕೆ ಮರಳುತ್ತೇನೆ ಎಂದಿದ್ದರು. ಅದರಂತೆ ಪಾಡ್‌ಕಾಸ್ಟ್‌ ಕಾರ್ಯಕ್ರಮ ಆರಂಭಿಸಿದ್ದು, ‘ಸಮಂತಾ’ ಯುಟ್ಯೂಬ್‌ ಚಾನೆಲ್‌ನಲ್ಲಿ ಮೊದಲ ಎಪಿಸೋಡ್‌ ಅನ್ನು ಹಂಚಿಕೊಂಡಿದ್ದಾರೆ. 

ADVERTISEMENT

ಅಲ್ಕೇಶ್‌ ಎನ್ನುವವರೊಂದಿಗೆ ಮಾತುಕತೆ ಆರಂಭಿಸಿ, ತಮಗಿರುವ ಮಯೋಸಿಟಿಸ್ ಕಾಯಿಲೆ ಬಗ್ಗೆ ಹೇಳಿಕೊಂಡಿದ್ದಾರೆ. 

'ನಾನು ಈ ಸಮಸ್ಯೆಯ ಎದುರಿಸಿದ ಹಿಂದಿನ ವರ್ಷವನ್ನು ವಿಶೇಷವಾಗಿ ನೆನಪಿಸಿಕೊಳ್ಳುತ್ತೇನೆ. ಅದು ನನಗೆ ಅತ್ಯಂತ ಕಷ್ಟಕರವಾದ ವರ್ಷವಾಗಿತ್ತು. ಕಳೆದ ವರ್ಷದ ಜೂನ್‌ನಲ್ಲಿ, ಮುಂಬೈನಿಂದ ಬರುವಾಗ, ಕೊನೆಗೂ ನಾನು ನೆಮ್ಮದಿಯಾಗಿದ್ದೇನೆ ಎಂದು ಗೆಳೆಯನ ಬಳಿ ಹೇಳಿಕೊಂಡಿದ್ದೆ. ನಾನು ಬಹಳ ಸಮಯದಿಂದ ಸ್ವಲ್ಪವೂ ವಿಶ್ರಾಂತಿಯನ್ನು ಪಡೆದಿರಲಿಲ್ಲ. ಈಗ ಉಸಿರಾಡಲು ಸಾಧ್ಯವಾಯಿತು. ಕಣ್ತುಂಬ ನಿದ್ದೆ ಮಾಡಬಹುದು, ನನ್ನ ಇಷ್ಟದ ಕೆಲಸದತ್ತ ಗಮನಹರಿಸಬಹುದು ಎಂದುಕೊಂಡಿದ್ದೆ. ಆದರೆ ಇದ್ದಕ್ಕಿದ್ದ ಹಾಗೆ ಮಯೋಸಿಟಿಸ್‌ಗೆ ಒಳಗಾಗಿದ್ದೆ’ ಎಂದಿದ್ದಾರೆ.

‘ನಾನು ಈ ಪಾಡ್‌ಕಾಸ್ಟ್‌ ಮಾಡಲು ಬಯಸಿದ ಕಾರಣ, ಒಂದು ಕೆಟ್ಟ ಅನುಭವವನ್ನು ಅನುಭವಿಸಿ ಹೊರಬಂದಿದ್ದೇನೆ. ಆದರೆ ಈ ಕಾಯಿಲೆ  ಜೀವನಪರ್ಯಂತ ಇರುತ್ತದೆ. ಹೀಗಾಗಿ ಅದರೊಂದಿಗೆ ನಾನು ಬದುಕಬೇಕಿದೆ. ಜನರು ಇಂತಹ ಕಾಯಿಲೆಗಳಿಂದ ಎಚ್ಚರಿಕೆವಹಿಸಬೇಕು. ನನ್ನ ಅನುಭವವನ್ನು ಹಂಚಿಕೊಳ್ಳಲು ಆರಂಭಿಸಿದ ಕಾರ್ಯಕ್ರಮವಿದು’ ಎಂದು ಹೇಳಿದ್ದಾರೆ.

2022ರ ಅಕ್ಟೋಬರ್‌ನಲ್ಲಿ  ನಟಿ ಸಮಂತಾ ರುತ್ ಪ್ರಭು ‘ಮಯೋಸಿಟಿಸ್’ (ಸ್ನಾಯು ಉರಿಯೂತ) ಎಂಬ ಕಾಯಿಲೆಗೆ ತುತ್ತಾಗಿರುವ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ಬಹಿರಂಗಪಡಿಸಿದ್ದರು 

‘ಸಂಪೂರ್ಣವಾಗಿ ಗುಣಮುಖಳಾದ ಮೇಲೆ ಈ ವಿಷಯ ತಿಳಿಸೋಣ ಎಂದುಕೊಂಡಿದ್ದೆ. ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದು ಶೀಘ್ರದಲ್ಲೇ ಸಂಪೂರ್ಣವಾಗಿ ಗುಣಮುಖಳಾಗುತ್ತೇನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. 

ಆರೋಗ್ಯದತ್ತ ನಿಗಾವಹಿಸಬೇಕೆಂದು ಕೆಲವು ತಿಂಗಳುಗಳ ಕಾಲ ಕೆಲಸದಿಂದ ದೂರವಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.