ADVERTISEMENT

ಪ್ರಾಚೀನ ಅಭ್ಯಾಸಗಳ ಕುರಿತಾದ ‘ಬ್ಯಾಕ್ ಟು ದಿ ರೂಟ್ಸ್’ ಪುಸ್ತಕ ರಚಿಸಿದ ತಮನ್ನಾ

ಪಿಟಿಐ
Published 21 ಆಗಸ್ಟ್ 2021, 14:16 IST
Last Updated 21 ಆಗಸ್ಟ್ 2021, 14:16 IST
ತಮನ್ನಾ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್
ತಮನ್ನಾ ಇನ್‌ಸ್ಟಾಗ್ರಾಮ್ ಖಾತೆಯ ಸ್ಕ್ರೀನ್ ಗ್ರ್ಯಾಬ್   

ನವದೆಹಲಿ: ಲೈಫ್‌ಸ್ಟೈಲ್ ಕೋಚ್ ಲ್ಯೂಕ್ ಕುಟಿನ್ಹೋ ಮತ್ತು ನಟಿ ತಮನ್ನಾ ಅವರುಪ್ರಾಚೀನ ಭಾರತೀಯ ಅಭ್ಯಾಸಗಳ ಕುರಿತಾದ ‘ಬ್ಯಾಕ್ ಟು ದಿ ರೂಟ್ಸ್’ ಪುಸ್ತಕವನ್ನು ಹೊರತಂದಿದ್ದಾರೆ.

ಭಾರತದ ಪುರಾತನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ರೋಗಗಳನ್ನು ತಡೆಗಟ್ಟುವುದು, ದೀರ್ಘಾಯುಷ್ಯವನ್ನು ಪಡೆಯುವುದು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಕುರಿತಾದ ಪುಸ್ವಕ ಇದಾಗಿದೆ. ಜೊತೆಗೆ, ಈ ಪ್ರಾಚೀನ ಅಭ್ಯಾಗಳು ಎಷ್ಟು ಅಗ್ಗವಾಗಿವೆ ಎಂಬುದನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.

ತಮನ್ನಾ ಅವರ ‘ಬ್ಯಾಕ್ ಟು ದಿ ರೂಟ್ಸ್’ ಪುಸ್ತಕವನ್ನು ಪೆಂಗ್ವಿನ್ ರ್‍ಯಾಂಡಮ್ ಹೌಸ್ ಇಂಡಿಯಾ (ಪಿಆರ್‌ಎಚ್‌ಐ) ಪ್ರಕಟಿಸಿದೆ. ಆಗಸ್ಟ್ 30 ರಂದು ಪುಸ್ತಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ADVERTISEMENT

‘ಬ್ಯಾಕ್ ಟು ರೂಟ್ಸ್' ನನ್ನ ಮೊದಲ ಪುಸ್ತಕವಾಗಿದೆ. ಅದೇ ಕಾರಣಕ್ಕಾಗಿ ವಿಶೇಷವಾಗಿದೆ. ಆದರೆ, ಅದಕ್ಕಿಂತ ಹೆಚ್ಚಾಗಿ, ನಾನು ಭಾರತದ ಪ್ರಾಚೀನ ಅಭ್ಯಾಸಗಳನ್ನು ನಿಜವಾಗಿಯೂ ನಂಬುತ್ತೇನೆ ಮತ್ತು ಹೆಚ್ಚಿನ ಜನರು ಅದನ್ನು ಅನುಭವಿಸಬೇಕೆಂದು ಬಯಸುತ್ತೇನೆ. ನಮ್ಮ ಪ್ರಾಚೀನ ಅಭ್ಯಾಸಗಳನ್ನು ಜನರಿಗೆ ಅರ್ಥ ಮಾಡಿಸುವುದು ನನ್ನ ಗುರಿ. ಏಕೆಂದರೆ, ಇದು ದೈಹಿಕವಾಗಿ ಸದೃಢವಾಗಿರುವ ಕಲ್ಪನೆಯನ್ನೂ ಮೀರಿದೆ ಎಂದು ತಮನ್ನಾ ಹೇಳಿದ್ದಾರೆ.

‘ವಿಶೇಷವಾಗಿ, ಇಂದಿನ ನಿರಂತರ ಒತ್ತಡ ಮತ್ತು ಸ್ಪರ್ಧಾತ್ಮಕ ಜಗತ್ತಿನಲ್ಲಿ, ಈ ಸಾಂಸ್ಕೃತಿಕ ಜ್ಞಾನವು ಎಲ್ಲಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ’ ಎಂದು ಪುಸ್ತಕದೊಂದಿಗೆ ಲೇಖಕರಾಗಿ ಪದಾರ್ಪಣೆ ಮಾಡಿದ ನಟಿ ತಮನ್ನಾ ಪಿಟಿಐಗೆ ತಿಳಿಸಿದರು.

ದೀರ್ಘಾವಧಿಯ ಸ್ವಾಸ್ಥ್ಯವನ್ನು ಉತ್ತೇಜಿಸುವಲ್ಲಿ 100 ಕ್ಕೂ ಹೆಚ್ಚು ಪುರಾತನ ಭಾರತೀಯ ಪದ್ಧತಿಗಳ ಹಿಂದಿನ ತಾರ್ಕಿಕತೆಯನ್ನು ನೀಡುವುದರ ಜೊತೆಗೆ, ಪುಸ್ತಕವು ಸಾಂಪ್ರದಾಯಿಕ ಭಾರತೀಯ ಪಾಕವಿಧಾನಗಳು, ಸೂಪರ್‌ಫುಡ್‌ಗಳು, ಮಲಬದ್ಧತೆ, ಆಮ್ಲೀಯತೆ ಮತ್ತು ಜ್ವರದಂತಹ ಅನೇಕ ಕಾಯಿಲೆಗಳಿಗೆ ಪರಿಹಾರಗಳನ್ನು ನೀಡುವ ಸಲಹೆಗಳ ಬಗ್ಗೆಯೂ ಹೇಳುತ್ತದೆ.

‘ಭಾರತವು, ಸಾಂಸ್ಕೃತಿಕ ನಂಬಿಕೆಗಳು ಮತ್ತು ಅಭ್ಯಾಸಗಳನ್ನು ಹೊಂದಿರುವ ದೇಶವಾಗಿದೆ. ಇದನ್ನು ತರ್ಕ ಮತ್ತು ತಿಳುವಳಿಕೆಯಿಂದ ಅರ್ಥಮಾಡಿಕೊಂಡಾಗ ಮತ್ತು ಅಭ್ಯಾಸ ಮಾಡಿದಾಗ, ಅದು ನಮ್ಮ ಆರೋಗ್ಯವನ್ನು ಬದಲಿಸುವ ಅಪಾರ ಶಕ್ತಿಯನ್ನು ಹೊಂದಿದೆ’ ಎಂದು ಕುಟಿನ್ಹೋ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.