
ಯುಗಾಂಡದ ಘೆಟೋ ಕಿಡ್ಸ್ ಜೊತೆ ನಟರಾದ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಹೆಜ್ಜೆ ಹಾಕಿರುವುದು ಸದ್ಯ ಟ್ರೆಂಡಿಂಗ್‌ನಲ್ಲಿದೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳಿರುವ ‘45’ ಚಿತ್ರದ ‘ಆ್ಯಫ್ರೊ ಟಪಾಂಗ್’ ಹಾಡು ಯುಟ್ಯೂಬ್‌ನಲ್ಲಿ ಎಂಟು ದಿನಗಳಲ್ಲಿ ಹದಿನಾಲ್ಕು ಮಿಲಿಯನ್ (1.4 ಕೋಟಿ)ಗಿಂತ ಅಧಿಕ ವೀಕ್ಷಣೆ ಪಡೆದಿದೆ. ಈ ಪ್ರಮೋಷನಲ್ ಹಾಡು ಸಿನಿಮಾದಲ್ಲಿಲ್ಲದಿದ್ದರೂ ಚಿತ್ರದತ್ತ ಪ್ರೇಕ್ಷಕರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದೆ.
ಹಾಡಿನಲ್ಲಿ ಮೂವರೂ ನಾಯಕರ ಹೊಸ ಲುಕ್ಸ್, ಹೆಜ್ಜೆಗೆ ಅಭಿಮಾನಿಗಳು ಫಿದಾ ಆಗಿದ್ದು, ಜಾನಿ ಮಾಸ್ಟರ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಎಂ.ಸಿ.ಬಿಜ್ಜು ಹಾಗೂ ನಿಶಾನ್ ರೈ ಈ ಹಾಡನ್ನು ಬರೆದು, ಹಾಡಿದ್ದಾರೆ. ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.