ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ನಟ ಅಕ್ಷಯ್ ಕುಮಾರ್ ಅಭಿನಯಿಸಿದ್ದಾರೆ ಎನ್ನಲಾದ ‘ಮಹರ್ಷಿ ವಾಲ್ಮೀಕಿ’ ಸಿನಿಮಾದ ಟ್ರೇಲರ್ ಹರಿದಾಡುತ್ತಿದೆ.
‘ನಾನು ಮಹರ್ಷಿ ವಾಲ್ಮೀಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡುತ್ತಿವೆ. ಅದು ನಾನಲ್ಲ, ಎಐ ಬಳಸಿಕೊಂಡು ಮಾಡಿರುವ ನಕಲಿ ಟ್ರೇಲರ್ ಅದು’ ಎಂದು ನಟ ಅಕ್ಷಯ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
‘ಇಂದು ಎಐ ಬಳಸಿಕೊಂಡು ದಾರಿ ತಪ್ಪಿಸುವ ಮಾಹಿತಿಗಳನ್ನು ಸೃಷ್ಟಿಸಲಾಗುತ್ತಿದೆ. ಕೆಲವು ಸುದ್ದಿ ಮಾಧ್ಯಮಗಳು ಕೂಡ ಸಿನಿಮಾದ ಕುರಿತು ಸರಿಯಾದ ಮಾಹಿತಿ ಪಡೆಯದೆ ಸುದ್ದಿ ಮಾಡುತ್ತಿವೆ. ದಯವಿಟ್ಟು ಮಾಧ್ಯಮಗಳು ಪರಿಶೀಲನೆ ಮಾಡಿದ ಬಳಿಕ ಈ ರೀತಿಯ ಸುದ್ದಿಗಳನ್ನು ಪ್ರಕಟಿಸಿ’ ಎಂದು ಮನವಿ ಮಾಡಿದ್ದಾರೆ.
ಇತ್ತೀಚೆಗಷ್ಟೇ ಬಾಲಿವುಡ್ ನಟ ಅಭಿಷೇಕ್ ಬಚ್ಚನ್, ನಟಿ ಐಶ್ವರ್ಯಾ ರೈ ಬಚ್ಚನ್ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರು ಅಂರ್ತಜಾಲದಲ್ಲಿ ತಮ್ಮ ಹೆಸರು, ಚಿತ್ರ, ಧ್ವನಿಯನ್ನು ದುರ್ಬಳಕೆ ಮಾಡುವುದನ್ನು ತಡೆಯಬೇಕು ಎಂದು ಕಾನೂನಿನ ಮೊರೆ ಹೋಗಿದ್ದರು.
ನಟ ಅಕ್ಷಯ್ ಕುಮಾರ್ ನಟನೆಯ ‘ಜಾಲಿ ಎಲ್‌ಎಲ್‌ಬಿ 3’ ಸಿನಿಮಾವು ಸೆ.19 ರಂದು ಬಿಡುಗಡೆಗೊಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ₹ 60 ಕೋಟಿಗೂ ಅಧಿಕ ಗಳಿಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.