ADVERTISEMENT

ಮಾವನ ಮೇಲೆ ಐಶು ಮುನಿಸು!

​ಪ್ರಜಾವಾಣಿ ವಾರ್ತೆ
Published 19 ಮೇ 2019, 10:46 IST
Last Updated 19 ಮೇ 2019, 10:46 IST
ಐಶ್ವರ್ಯಾ ರೈ ಬಚ್ಚನ್
ಐಶ್ವರ್ಯಾ ರೈ ಬಚ್ಚನ್   

ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಮಾವ ಅಮಿತಾಭ್‌ ಬಚ್ಚನ್ ಮೇಲೆ ಮುನಿಸಿಕೊಂಡಿದ್ದಾರಂತೆ. ಯಾಕೆ ಅಂತೀರಾ? ಅಮಿತಾಭ್ ತಮ್ಮ ಹೊಸ ಚಿತ್ರ ‘ಚೆಹರೆ’ಯಲ್ಲಿ ಇಮ್ರಾನ್ ಹಶ್ಮಿ ಜೊತೆ ನಟಿಸುತ್ತಿದ್ದಾರೆ. ಈ ವಿಷಯ ಐಶೂಗೆ ಸ್ವಲ್ಪವೂ ಇಷ್ಟವಿಲ್ಲವಂತೆ. ಇಮ್ರಾನ್ ಹಶ್ಮಿ ಈ ಹಿಂದೆ ಟಾಕ್ ಷೋವೊಂದರಲ್ಲಿ ಐಶು ವಿರುದ್ಧ ಮಾತನಾಡಿದ್ದನ್ನೇ ಮನಸಲ್ಲಿಟ್ಟುಕೊಂಡಿದ್ದು, ಈಗ ಅಮಿತಾಭ್, ಹಶ್ಮಿ ಜೊತೆಗೆ ನಟಿಸುತ್ತಿರುವ ಬಗ್ಗೆ ಐಶು ಮುನಿಸು ತೋರಿಸುತ್ತಿದ್ದಾರಂತೆ.

ಕೆಲ ವರ್ಷಗಳ ಹಿಂದೆ ಇಮ್ರಾನ್, ಐಶು ಜೊತೆಗೆ ನಟಿಸಲು ಇಷ್ಟವಿಲ್ಲವೆಂದು ಮುಕ್ತವಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಕರಣ್ ಜೋಹರ್‌ ಅವರ ‘ಕಾಫಿ ವಿತ್ ಕರಣ್‌’ನಲ್ಲಿ ಐಶ್ವರ್ಯಾ ಕುರಿತು ಅಭಿಪ್ರಾಯ ಕೇಳಿದಾಗ, ಐಶ್ವರ್ಯಾ ಅವರನ್ನು ಪ್ಲಾಸ್ಟಿಕ್‌ಗೆ ಹೋಲಿಸಿ ಮಾತನಾಡಿದ್ದರು. ಹಶ್ಮಿಯ ಈ ಮಾತಿನಿಂದ ಐಶು ತುಂಬಾ ನೊಂದುಕೊಂಡಿದ್ದರು.

ನಂತರದ ದಿನಗಳಲ್ಲಿ ಐಶ್ವರ್ಯಾಗೆ ಸಂದರ್ಶನವೊಂದರಲ್ಲಿ ನಿಮ್ಮ ಬಗ್ಗೆ ಬಂದ ಅತಿ ಕೆಟ್ಟ ಕಾಮೆಂಟ್ ಯಾವುದು ಎಂದು ಸಂದರ್ಶನ ವೊಂದರಲ್ಲಿ ಕೇಳಿದಾಗ ‘ಫೇಕ್ ಮತ್ತು ಪ್ಲಾಸ್ಟಿಕ್’ ಅನ್ನುವ ಕಾಮೆಂಟ್ ತಮಗೆ ಬಂದ ಅತಿ ಕೆಟ್ಟ ಕಾಮೆಂಟ್ ಎಂದು ಹೇಳಿದ್ದರು.ಮತ್ತೆ ಈ ಬಗ್ಗೆ ಹಶ್ಮಿಯನ್ನು ಪ್ರಶ್ನಿಸಿದಾಗ, ಎರಡು ವರ್ಷಗಳ ಹಿಂದೆ ಕರಣ್ ಜೋಹರ್ ಷೋನಲ್ಲಿ ತಾವು ಮಾತನಾಡಿದ್ದನ್ನು ಸಮರ್ಥಿಸಿಕೊಂಡಿದ್ದ ಹಶ್ಮಿ, ಅಕಸ್ಮಾತ್ ಐಶ್ವರ್ಯಾ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕರೆ ಈ ಬಗ್ಗೆ ತಾವು ಕ್ಷಮೆಯಾಚಿಸುವುದಾಗಿ ಹೇಳಿದ್ದರು.

ADVERTISEMENT

ಈಗ ಹಶ್ಮಿ ಜೊತೆಯಲ್ಲಿಯೇ ಮಾವ ಅಮಿತಾಭ್ ನಟಿಸುತ್ತಿರುವುದು ಐಶುಗೆ ಕೋಪ ತಂದಿದೆಯಂತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.